ಯುವತಿ ಮೇಲೆ ಬಸ್​ ಹತ್ತಿಸಲು ಯತ್ನಿಸಿದ BMTC ಚಾಲಕ: ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಯುವತಿ: ಬಿಎಂಟಿಸಿ ಬಸ್​ ಚಾಲಕ ಅಮಾನತು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಚಾಲಕ ಯುವತಿ ಮೇಲೆ ಬಸ್​ ಹತ್ತಿಸಲು ಯತ್ನಿಸಿರುವ ಘಟನೆ ಕಸ್ತೂರ್ಬಾ ರಸ್ತೆಯ ಕ್ಷೀನ್ಸ್​ ಜಂಕ್ಷನ್​ (ಎಂ.ಜಿ.ರಸ್ತೆ) ಬಳಿ ನಡೆದಿದೆ.

ಮೇ 23ರ ಸಂಜೆ 5.40ಕ್ಕೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬಿಎಂಟಿಸಿ ಬಸ್​ ಚಾಲಕ ಮತ್ತು ಯುವತಿ ನಡುವೆ ಗಲಾಟೆಯಾಗಿದೆ. ಈ ಹಿನ್ನೆಲೆ ಕ್ಷೀನ್ಸ್​ ಜಂಕ್ಷನ್​ನಲ್ಲಿ ಕಾರಿನಿಂದ ಇಳಿದ ಯುವತಿ ಬಿಎಂಟಿಸಿ ಬಸ್ ಚಾಲಕನನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ, ಚಾಲಕ ಯುವತಿಯ ಮೇಲೆ​ ಬಸ್​ ನುಗ್ಗಿಸಿದ್ದಾನೆ.

ಯುವತಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದು, ಸ್ವಲ್ಪ ಯಾಮಾರಿದ್ದರು ಯುವತಿಯ ಜೀವಕ್ಕೆ ಕುತ್ತು ಬರುತ್ತಿತ್ತು. ಚಾಲಕನ ಕೃತ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ.

ಇನ್ನು, ಯುವತಿಯ ಮೇಲೆ ಬಸ್​ ಹತ್ತಿಸಲು ಯತ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಬಿಎಂಟಿಸಿ ಬಸ್​ ಚಾಲಕ ಅಮಾನತು
ಯುವತಿ ಮೇಲೆ ಬಿಎಂಟಿಸಿ ಬಸ್ ಹತ್ತಿಸಲು ಮುಂದಾಗಿದ್ದ ಚಾಲಕ ಪ್ರಶಾಂತ್ ಅವರನ್ನು ಅಮಾನತುಗೊಳಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!