ಬೇರೆಯವರ ಪ್ರಾಪರ್ಟಿ ಗಲಾಟೆ ನಡುವೆ ಯುವಕರನ್ನು ಕಳುಹಿಸಿಕೊಟ್ಟು ಮಹಿಳೆ ಮೇಲೆ ಹಲ್ಲೆ ಆರೋಪ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಇಟ್ಟಿದ್ದ ದಾಸನನ್ನು ಬಂಧನ ಮಾಡಲಾಗಿದೆ.
ಮೈತುಂಬ ಗೋಲ್ಡು ಸುತ್ತಲೂ ಹುಡುಗರು, ದೊಡ್ಡ ದೊಡ್ಡವರ ಜೊತೆ ಫೋಟೊಗೆ ಫೋಸ್ ಕೊಡುತ್ತಿದ್ದ ದಾಸ. ಈತನಿಗೆ ದೊಡ್ಡ ಮಟ್ಟದ ಫಾಲೋವರ್ಸ್ ಇದ್ದಾರೆ.
ಇನ್ನೂ ಯಾವಾಗಲು ಸೋಶಿಯಲ್ ಮೀಡಿಯಾದಲ್ಲಿ ಹವಾ ಇಟ್ಟವನ ಬಂಧನಕ್ಕೆ ಕಾರಣ, ಬೇರೆಯವರ ಪ್ರಾಪರ್ಟಿ ಗಲಾಟೆ ನಡುವೆ ಯುವಕರನ್ನು ಕಳುಹಿಸಿಕೊಟ್ಟು ಮಹಿಳೆ ಮೇಲೆ ಹಲ್ಲೆ ಆರೋಪ ಹಿನ್ನೆಲೆ ಬಂಧನ ಮಾಡಲಾಗಿದೆ.
ಮಹಿಳೆ ಹಾಗೂ ಓರ್ವ ವ್ಯಕ್ತಿ ನಡುವೆ ಜಾಗದ ಗಲಾಟೆ ಇತ್ತು. ಆ ಜಾಗದ ವಿಚಾರವಾಗಿ ವ್ಯಕ್ತಿ ದಾಸನ ಸಂಪರ್ಕಿಸಿದ್ದ. ಬಳಿಕ ದಾಸನ ಮೂಲಕ ಹುಡುಗರ ಬಿಟ್ಟು ಮಹಿಳೆಗೆ ಹಲ್ಲೆ ಮಾಡಿರುವ ಆರೋಪ ಮಾಡಿದ್ದಾರೆ. ಹಲ್ಲೆಗೊಳಗಾದ ಮಹಿಳೆ ದಾಸನ ಯುವಕರು ಎಂದು ಹೇಳಿ ಹಲ್ಲೆ ಮಾಡಿದ್ದಾಗಿ ದೂರು ನೀಡಿದ್ದರು. ಮಹಿಳೆ ದೂರು ನೀಡಿದ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡು ದಾಸನನ್ನು ಬಂಧಿಸಿದ್ದಾರೆ.
ಸದ್ಯ ಈತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಯಲಹಂಕ ಪೊಲೀಸರು.