ಮುಂಬೈನ ವಸಾಯಿಯ ಚಿಂಚ್ಪಾಡಾದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಹಾಡಹಗಲೇ ನಡು ರಸ್ತೆಯಲ್ಲಿ ಕಬ್ಬಿಣದ ಸಲಾಕೆ (ವ್ರೆಂಚ್)ಯಿಂದ ತಲೆಗೆ 15 ಬಾರಿ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ.
ಕಬ್ಬಿಣದ ಸಲಾಕೆಯಿಂದ ಪ್ರೇಯಸಿಗೆ 15 ಬಾರಿ ಹೊಡೆದು ಹತ್ಯೆ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿರುವ ವ್ಯಕ್ತಿ ಸ್ಪ್ಯಾನರ್‌ನಿಂದ ಆಕೆಯ ತಲೆಗೆ ಹೊಡೆಯುವುದನ್ನು ಮುಂದುವರಿಸಿದಾಗ, “ಕ್ಯುನ್ ಕಿಯಾ ಐಸಾ ಮೇರೆ ಸಾಥ್ (ನನಗೆ ಯಾಕೆ ಹೀಗೆ ಮಾಡಿದ್ದೀರಿ)” ಎಂದು ಹೇಳುವುದು ಕೇಳಿಸಿತು.
ಆಕೆ ಪ್ರಜ್ಞೆ ಇಲ್ಲದೆ ಅಲ್ಲೇ ಬಿದ್ದಿದ್ದಳು, ಇಬ್ಬರ ಗುರುತು ಇನ್ನೂ ಸಿಕ್ಕಿ ಪತ್ತೆಯಾಗಿಲ್ಲ. ಈ ಘಟನೆಯನ್ನು ರಸ್ತೆಯಲ್ಲಿ ಹೋಗುವವವರು ವಿಡಿಯೋ ಮಾಡಿದ್ದಾರೆ.
ಯಾರೂ ಕೂಡ ಭಯದಿಂದ ಆಕೆಯ ರಕ್ಷಣೆಗೆ ಬರಲಿಲ್ಲ, ರಕ್ತದ ಮಡುವಿನಲ್ಲಿ ಆಕೆ ನಿತ್ರಾಣಳಾಗಿ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ರೋಹಿತ್ ಯಾದವ್ ಮತ್ತು ಆರತಿ ಕೆಲವು ದಿನಗಳ ಹಿಂದೆ ದೂರವಾಗಿದ್ದರು. ಆರತಿ ಬೇರೊಬ್ಬನನ್ನು ನೋಡಲಾರಂಭಿಸಿದ್ದಾಳೆ ಎಂದು ಶಂಕಿಸಿದ ರೋಹಿತ್ ಕೋಪದ ಭರದಲ್ಲಿ ಆಕೆಯನ್ನು ಕೊಂದಿದ್ದಾನೆ ಎನ್ನಲಾಗಿದೆ.
ವಲೀವ್ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ, ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ಪ್ರಸ್ತುತ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.