ಯುಗಾದಿ ಹಬ್ಬದಂದು ಜೂಜಾಟಕ್ಕೆ ನಿಷೇಧವಿದ್ದರೂ ಜೂಜಾಡಿದ ಜೂಜುಕೋರರು: ಕೋಳಿ ಪಂದ್ಯ, ಇಸ್ಪೀಟು, ಹಾಗೂ ಇನ್ನಿತರ ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ

ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಜಿಲ್ಲೆಯ ಯಾವುದೇ ಹೋಟೆಲ್‌, ವಸತಿ ಗೃಹ, ತೋಟದ ಮನೆ , ರಸ್ತೆ ಬದಿಗಳಲ್ಲಿ ಟೆಂಟ್‌ ನಿರ್ಮಿಸಿ ಜೂಜು, ಮಟ್ಕಾ, ಇಸ್ಪೀಟ್, ಬೆಟ್ಟಿಂಗ್ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಆದರೂ ಸಹ ಪೊಲೀಸ್ ಇಲಾಖೆಯ ಎಚ್ಚರಿಕೆಯನ್ನು ಗಾಳಿಗೆ ತೂರಿ ಯುಗಾದಿ ಹಬ್ಬದಂದು ಜೂಜಾಟವಾಡಿದ್ದ 293 ಜನರನ್ನು ವಶಕ್ಕೆ ಪಡೆದು ಅವರ ವಿರುದ್ದ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಜೂಜೂಕೋರರು ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಕೋಳಿ ಪಂದ್ಯ, ಇಸ್ಪೀಟು ಜೂಜಾಟ, ಹಾಗೂ ಇನ್ನಿತರ ಜೂಜಾಟಗಳನ್ನು ಆಡಿ ಪೊಲೀಸರ ಅತಿಥಿಗಳಾಗಿದ್ದಾರೆ.

ಒಟ್ಟು 293 ಜನರ ವಿರುದ್ಧ 48 ಪ್ರಕರಣಗಳನ್ನು ದಾಖಲಿಸಿಕೊಂಡು, ಒಟ್ಟು 2 ಲಕ್ಷ 40 ಸಾವಿರ ಹಣ, ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *