ದೊಡ್ಡಬಳ್ಳಾಪುರ : ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೂ , ರಾಜಕೀಯ ವ್ಯಕ್ತಿಗೂ ಕನ್ನಡಿಗರ ಬಣದ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸುವುದಿಲ್ಲ ಎಂದು ಕರವೇ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಚಂದ್ರು ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿಗೆ ಮೆಟ್ರೋ ರೈಲು ಬೇಕೆಂದು ಹಲವು ಬಾರಿ ಕೇಂದ್ರ ರೈಲ್ವೇ ಸಚಿವರಿಗೆ ಮನವಿ ಮಾಡಿದರೂ ಏನೂ ಪ್ರಯೋಜನ ಆಗಲಿಲ್ಲ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೋಸಕೋಟೆಗೆ ಮೆಟ್ರೋ ಬರಲಿದೆ, ದೇವನಹಳ್ಳಿಯಲ್ಲಿ ಈಗಾಗಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ, ದೊಡ್ಡಬಳ್ಳಾಪುರದಲ್ಲಿ ಯಾವುದೇ ಅಭಿವೃದ್ದಿ ಕಾರಗಯ ಆಗಿಲ್ಲ, ತಾಲ್ಲೂಕು ಅಭಿವೃದ್ದಿಯ ಬಗ್ಗೆ ಧ್ವನಿ ಎತ್ತದ ಜನಪ್ರತಿನಿಧಿಗಳು, ತಾಲ್ಲೂಕಿನ ಹಲವು ಕೆರೆಗಳು ಸಂರಕ್ಷಣೆಯಾಗುತ್ತಿಲ್ಲ ಇದನ್ನು ಸಂರಕ್ಷಿಸಲು ಮುಖ್ಯಮಂತ್ರಿಗಳು ಬರಬೇಕಾ ಎಂದು ಪ್ರಶ್ನಿಸಿದರು.
ಇದೇ ರೀತಿ ನಮ್ಮ ತಾಲ್ಲೂಕನ್ನು ಕಡೆಗಣಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದೊಡ್ಡಬಳ್ಳಾಪುರವನ್ನು ಹೊರಗಿಡುತ್ತಾರೆ ಆಗ ತಾಲ್ಲೂಕಿನ ಅಭಿವೃದ್ದಿ ಮತ್ತಷ್ಟು ಕುಂಠಿತವಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ತಾಲ್ಲೂಕಿಗೆ ಸಂಬಂಧಿಸಿದಂತೆ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಜನರ ಮುಂದೆ ಗಂಟಾಘೋಷವಾಗಿ ಭರವಸೆ ನೀಡಿದರೆ ಅಂತಾ ಪಕ್ಷಕ್ಕೆ ನಮ್ಮ ಬೆಂಬಲವನ್ನು ನೀಡುತ್ತೇವೆ ಎಂದರು.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್ , ತಾಲೂಕು ಯುವ ಘಟಕ ಅಧ್ಯಕ್ಷರು ತ.ನ ರಂಜಿತ್ ಗೌಡ , ತಾಲೂಕು ಯುವ ಘಟಕ ಕಾರ್ಯಾಧ್ಯಕ್ಷರು ಹರೀಶ್ ಕುಮಾರ್. ಎಸ್, ತಾಲೂಕು ಯುವ ಘಟಕ ಪ್ರಧಾನ ಕಾರ್ಯದರ್ಶಿ ಕಾರ್ತಿಕ್.ಆರ್ ,ತಾಲೂಕು ಯುವ ಘಟಕ ಸಂಚಾಲಕರು
ಬಸವರಾಜು , ಮಹಿಳಾ ಘಟಕದ ಅಧ್ಯಕ್ಷೆ ರಾಧ ಮಣಿ ಕೆ ವಿ, ಮಹಿಳಾ ಉಪಾಧ್ಯಕ್ಷರಾದ ಕಮಲಾಕ್ಷಿ. ಎಚ್ ಸೇರಿದಂತೆ ಇತರರು ಉಪಸ್ಥಿತರಿದ್ದರು.