ಯಶಸ್ವಿಯಾಗಿ ನಡೆದ ಹಳ್ಳಿ ಸೊಗಡಿನ ಕಾರ್ಯಕ್ರಮ: ಸಾಕು ಪ್ರಾಣಿಗಳನ್ನು ಪ್ರತ್ಯಕ್ಷವಾಗಿ ಕಣ್ತುಂಬಿಕೊಂಡು ಆನಂದಿಸಿದ ನ್ಯಾಷನಲ್ ಪ್ರೈಡ್ ಶಾಲಾ ಮಕ್ಕಳು

ಆಧುನಿಕತೆ, ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಹಳ್ಳಿಯ ಜೀವನ ಶೈಲಿಯು ಕಾಲಕ್ರಮೇಣ ಮಾಯವಾಗುದನ್ನ ನಾವು ಗಮನಿಸುತ್ತಿದ್ದೇವೆ. ಇಂದಿನ ಮಕ್ಕಳಿಗೆ ಹಳ್ಳಿಯ ಸೊಗಡಿನ ಬಗ್ಗೆ ಅರಿವು ಇಲ್ಲದಂತಾಗಿದೆ. ಹಳ್ಳಿಯ ವಾತಾವರಣವನ್ನ ಪರದೆಯಲ್ಲಿ ನೋಡುವಂತಾಗಿದೆ. ಹಳ್ಳಿಯ ಸಂಪೂರ್ಣ ಚಿತ್ರಣವನ್ನು ತೆರೆದಿಡುವ ಅಪೂರ್ವ ದೃಶ್ಯಗಳು ಇಂದು ಇಲ್ಲವಾಗುತ್ತಿವೆ.

ಈ ಹಿನ್ನೆಲೆ ನಗರದ ನ್ಯಾಷನಲ್ ಪ್ರೈಡ್ ಶಾಲೆಯು ಫಾರ್ಮ್ ಪಾರ್ಟಿ ಏರ್ಪಡಿಸಿ ಹಸು, ಮೇಕೆ, ಕುರಿ, ಕೋಳಿ, ಕತ್ತೆ, ಕುದುರೆ, ಮೊಲ, ಟರ್ಕಿ‌ ಕೋಳಿ, ಹಂದಿ ಹಾಗೂ ವಿವಿಧ ತಳಿಯ ಶ್ವಾನ ಸೇರಿದಂತೆ ಹಳ್ಳಿಯಲ್ಲಿ ರೈತರು ಸಾಕುವ ಎಲ್ಲಾ ಪ್ರಾಣಿಗಳನ್ನು ಶಾಲಾ ಆವರಣಕ್ಕೆ ಕರೆತಂದು ಮಕ್ಕಳಿಗೆ ಹಳ್ಳಿಯ ಸೊಗಡನ್ನ ಪರಿಚಯಿಸಲಾಯಿತು.

ಪುಟಾಣಿ ಮಕ್ಕಳು ಪ್ರಾಣಿ ಪಕ್ಷಿಗಳನ್ನು ನೇರವಾಗಿ ನೋಡಿ ತುಂಟ ನಗೆಯೊಂದಿಗೆ ಅವುಗಳ ಜೊತೆ ಫೋಟೋಗೆ ಪೋಸ್ ಆನಂದಿಸಿದರು. ಮಕ್ಕಳು ಕುದುರೆ ಸವಾರಿ ಮಾಡಿ ಮೋಜು ಅನುಭವಿಸಿದರು. ಇದಲ್ಲದೇ ರೇಷ್ಮೆ ಹುಳುವಿನ ಜೀವನ ಚಕ್ರದ ವಿವಿಧ ಮಜಲುಗಳನ್ನು ನೇರವಾಗಿ ತೋರಿಸಲಾಯಿತು.

ಅದೇರೀತಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಆಗ ಓದಿನ ಜತೆಗೆ ಉಲ್ಲಾಸ-ಉತ್ಸಾಹ, ದೈಹಿಕ ಚಟುವಟಿಕೆ ದೊರೆಯುತ್ತದೆ ಎಂಬ ಪರಿಕಲ್ಪನೆಯೊಂದಿಗೆ ಪುಟಾಣಿಗಳಿ ಮನರಂಜನೆ ಜೊತೆಗೆ ಬೌದ್ದಿಕ ಮಟ್ಟ ಹೆಚ್ಚಿಸುವ ವಿವಿಧ ಬಗೆಯ ಆಟಗಳು, ಮ್ಯಾಜಿಕ್ ಶೋ, ಆಟದ ಮೂಲಕ ಅಕ್ಷರ ಮತ್ತು ಸಂಖ್ಯೆಗಳನ್ನು ಗುರುತಿಸು ಮ್ಯಾಜಿಕ್ ಮ್ಯಾಟ್, ಮಕ್ಕಳೊಂದಿಗೆ ಮಾತನಾಡುವ‌ ಮರ, 3ಡಿ ಅನಿಮೇಶನ್ ಯಂತ್ರದೊಂದಿಗೆ ಕಲಿಕಾಭ್ಯಾಸ ಮಾಡಿಸಲಾಯಿತು.

ಶಾಲೆಯ ಕಾರ್ಯದರ್ಶಿ ಸತೀಶ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರತಿ ವರ್ಷವೂ ನ್ಯಾಷನಲ್ ಫ್ರೈಡ್ ಶಾಲೆಯಲ್ಲಿ ನಾವಿನ್ಯ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಇದೇ ಮೊದಲಿಗೆ ಮಕ್ಕಳಿಗೆ ಮನರಂಜನೆ ಜೊತೆಗೆ ವಿವಿಧ ಸಾಕುಪ್ರಾಣಿಗಳನ್ನು ನೇರವಾಗಿ ನೋಡಿ ಆನಂದಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಜೊತೆಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸವ ಪ್ರಯತ್ನ ಮಾಡಲಾಗುತ್ತಿದೆ. ಶಾಲೆಯನ್ನು ಸುಸಜ್ಜಿತವಾಗಿ ನವೀಕರಿಸಿದ್ದು, ಈಜುಕೊಳ, ಸ್ಕೇಟಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರತಿ ತರಗತಿಯ ಕೋಣೆಗಳು ವಿಶಾಲವಾಗಿದ್ದು, ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಫಾರ್ಮ್ ಪಾರ್ಟಿ ಮಾಡಿರುವುದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಶಾಲೆಯ ಪ್ರಾಂಶುಪಾಲರಾದ ರಶ್ಮಿ‌ ಸತೀಶ್ ರಾಜ್ ಮಾತನಾಡಿ, ಶಾಲೆಯಲ್ಲಿ ಆಯೋಜಿಸಿರುವ ಫಾರ್ಮ್ ಪಾರ್ಟಿ ವಿನೂತನವಾಗಿದೆ. ಮಕ್ಕಳು ಅತ್ಯುತ್ಸಾಹದಿಂದ‌ ಪಾಲ್ಗೊಂಡು ಗ್ರಾಮೀಣ ಸೊಗಡಿನ ಜೊತೆಗೆ ಪ್ರಾಣಿ ಪಕ್ಷಿಗಳನ್ನು ನೇರವಾಗಿ ನೋಡಿ ಆನಂದಿಸಿದ್ದಾರೆ ಎಂದು‌ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ರಾಜು, ಶಾಲಾ ಸಿಬ್ಬಂದಿ, ಶಿಕ್ಷಕ ವೃಂದ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *