ನಗರ ಮತ್ತು ತಾಲೂಕಿನಾದ್ಯಂತ ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ರಸ್ತೆ ಅಪಘಾತದಿಂದ ಪ್ರಾಣಾ ಹಾನಿ ಸಂಭವಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ, ಅವಸರದ ಚಾಲನೆ, ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವುದು, ಸಂಚಾರಿ ನಿಯಮಗಳನ್ನ ಪಾಲಿಸದೇ ಇರುವುದು.
ರಸ್ತೆ ಅಪಘಾತ ನಿಯಂತ್ರಣ ಮಾಡುವ ಸದುದ್ದೇಶದಿಂದ ಮೃತ್ಯು ಸ್ವರೂಪಿ ಯಮ ವೇಷ ಧರಿಸಿದ ವ್ಯಕ್ತಿಯೋರ್ವ ರಸ್ತೆ ನಿಯಮ, ಹೆಲ್ಮೆಟ್ ಬಗ್ಗೆ ಅರಿವು, ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಎಚ್ಚರಿಕೆ, ನಿಯಮ ಪಾಲಿಸುವ ಸವಾರರನ್ನು ಶ್ಲಾಘನೆ ಮಾಡಿ, ಶೇಕ್ ಹ್ಯಾಂಡ್ ನೀಡುತ್ತಿದ್ದ ದೃಶ್ಯ ನಗರದ ಹೊರವಲಯದಲ್ಲಿನ ಬಾಶೆಟ್ಟಿಹಳ್ಳಿ ಬಳಿ ಕಂಡು ಬಂತು.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಎಜಾಕ್ಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ಪೊಲೀಸ್ ಇಲಾಖೆ ದೊಡ್ಡಬಳ್ಳಾಪುರ ಎಜಾಕ್ಸ್ ಸರ್ಕಾರಿ ಪಬ್ಲಿಕ್ ಶಾಲೆ ಬಾಶೆಟ್ಟಿಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಕಾಲ್ನಡಿಗೆ ಜಾಥಾ ಮೂಲಕ ಸಾರ್ವಜನಿಕರಲ್ಲಿ ರಸ್ತೆ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು.
ಸಪ್ತಾಹದ ಅಂಗವಾಗಿ ಅಜಾಕ್ಸ್ ಕಂಪನಿಯ ಸಿಬ್ಬಂದಿಗಳು ಯಮಧರ್ಮ, ಕಿಂಕರ, ಚಿತ್ರಗುಪ್ತರ ವೇಷ ಧರಿಸಿ ವಾಹನ ಸವಾರರಲ್ಲಿ ಸಾರಿಗೆ ನಿಯಮ ಪಾಲನೆ ಕುರಿತಂತೆ ಜಾಗೃತಿ ಮೂಡಿಸಿದರು.
ಈ ವೇಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪಂಕಜ, ಎಜಾಕ್ಸ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಎನ್.ಎಸ್.ಗಣಪತಿ, ಸಿಎಸ್’ಆರ್ ಅಧಿಕಾರಿ ಮಂಜುನಾಥ್, ಮುರುಗನ್, ಶ್ರೀಕಾಂತ್ ಅನಿರುದ್ಧ್, ಸೇರಿದಂತೆ ಎಜಾಕ್ಸ್ ಸರ್ಕಾರಿ ಪಬ್ಲಿಕ್ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಶಿಕ್ಷಣ…
ಆಕೆ ತಂದೆ ತಾಯಿಗೆ ಇದ್ದ ಏಕೈಕ ಮಗಳು. ಹಾಗಾಗಿ ತಂದೆ ತಾಯಿಗೆ ಮಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಮಗಳು ಚೆನ್ನಾಗಿ…
ದೊಡ್ಡಬಳ್ಳಾಪುರ ಹೊರವಲಯದಲ್ಲಿರುವ ನಾಗದೇನಹಳ್ಳಿಯ ಸಮೀಪದ ಪ್ರತಿಷ್ಠಿತ ಗೀತಂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ…
ಸಬ್ ಇನ್ಸ್‌ಪೆಕ್ಟರ್ ಡ್ರೆಸ್‌ನಲ್ಲಿ ಬಂದು 20 ಲಕ್ಷ ರೂ. ನಗದು, ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ…
2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ಫಿಕ್ಸ್ ಆಗಿದೆ. ಸಿಎಂ ಕುರ್ಚಿ ಕಾಳಗದ ನಡುವೆಯೇ ಹಣಕಾಸು ಖಾತೆಯನ್ನ ಹೊಂದಿರುವ…
ಕೊಡಗಿನ ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ನಟ ವಿಜಯ್ ದೇವರಕೊಂಡ ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ ಎನ್ನುವುದು…