ಐದು ಪಂದ್ಯಗಳ ಟಿ-ಟ್ವೆಂಟಿ ಸರಣಿಯ ಮೂರನೇ ಪಂದ್ಯದಲ್ಲಿ ಸರಣಿ ಸೋಲಿನ ಭೀತಿಯಲ್ಲಿದ್ದ ಆಸೀಸ್ ಪಡೆಗೆ ಸ್ಪೋಟಕ ಬ್ಯಾಟ್ಸ್ಮನ್ ಗ್ಲೇನ್ ಮ್ಯಾಕ್ಸ್ವಲ್ ಅಬ್ಬರದ ಬ್ಯಾಟಿಂಗ್ ಬಲದಿಂದ ರೋಚಕ ಜಯ ಸಾಧಿಸಿತು, ಈ ಮೂಲಕ ಸರಣಿ ಉಳಿಸಿಕೊಂಡಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ವೆಡ್ ಭಾರತದ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (6) ನಿರಾಸೆ ಮೂಡಿಸಿದರು, ಆದರೆ ಉಪ ನಾಯಕ ಋತುರಾಜ್ ಗಾಯಕ್ವಾಡ್ 13 ಬೌಂಡರಿ ಹಾಗೂ ಏಳು ಸಿಕ್ಸರ್ ನೆರವಿನಿಂದ ಅಜೇಯ 123 ರನ್ ಗಳಿಸಿ ತಂಡವನ್ನು 200 ರೈ ಗಡಿ ದಾಟಿಸಿದರು.
ಉಳಿದಂತೆ ನಾಯಕ ಸೂರ್ಯ ಕುಮಾರ್ ಯಾದವ್ (39) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವಮಾ೯ (31) ರನ್ ಗಳಿಸಿ ತಂಡಕ್ಕೆ ನೆರವಾದರು, ಆಸ್ಟ್ರೇಲಿಯಾದ ಪರವಾಗಿ ಎಲ್ಲಾ ಬೌಲರ್ ಗಳು ದುಬಾರಿಯಾದರು.
ಬೃಹತ್ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ ಆರಂಭಿಕ ಆಟಗಾರರಾದ ಮ್ಯಾಥ್ಯೂ ಹೆಡ್ (35), ಆರೋನ್ ಹ್ಯಾಡಿ (16) ರನ್ ಗಳಿಸಿ ಔಟಾದರು ನಂತರ ಬಂದ ಇಂಗ್ಲಿಷ್ (10)ಹೆಚ್ಚು ಹೊತ್ತು ನಿಲ್ಲಲಿಲ್ಲ.
ನಂತರ ಜೊತೆಯಾದ ಮಧ್ಯಮ ಕ್ರಮಾಂಕದ ಆಟಗಾರರಾದ ಗ್ಲೇನ್ ಮ್ಯಾಕ್ಸ್ವಲ್ ಕೇವಲ 48 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎಂಟು ಸಿಕ್ಸರ್ ನೆರವಿನಿಂದ (104)* ಹಾಗೂ ನಾಯಕ ಮ್ಯಾಥ್ಯೂ ವೆಡ್ (28 )ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ತಂಡಕ್ಕೆ ಗೆಲುವು ತಂದು ಕೊಟ್ಟ ಗ್ಲೇನ್ ಮ್ಯಾಕ್ಸ್ವಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.