
ಗುಜರಾತ್‌ನ ಅರವಲ್ಲಿ ಜಿಲ್ಲೆಯಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ. ಮೊಬೈಲ್ ಫೋನ್ ಕೊಡಿಸುವ ವಿಷಯದಲ್ಲಿ ಪತಿಯೊಂದಿಗೆ ಗಲಾಟೆ ಮಾಡಿಕೊಂಡ ಪತ್ನಿಯೊಬ್ಬಳು ಆವೇಶದಲ್ಲಿ ಪ್ರಾಣವನ್ನೆ ತ್ಯೆಜಿಸಿದ್ದಾಳೆ ಎನ್ನಲಾಗಿದೆ.
ನೇಪಾಳ ಮೂಲದ ಊರ್ಮಿಳಾ ಖಾನನ್ ರಿಜನ್ ಎಂಬ ಮಹಿಳೆ ತನ್ನ ಪತಿ ಮತ್ತು ಮಗುವಿನೊಂದಿಗೆ ಮೊಡಾಸಾದಲ್ಲಿ ವಾಸಿಸುತ್ತಿದ್ದರು. ಈ ದಂಪತಿಗಳು ಅಲ್ಲಿ ಚೈನೀಸ್ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಊರ್ಮಿಳಾ ಹೊಸ ಮೊಬೈಲ್ ಫೋನ್ ಕೊಡಿಸುವಂತೆ ಪತಿಯನ್ನು ಒತ್ತಾಯಿಸುತ್ತಿದ್ದರು.
ಆದರೆ, ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಪತಿ ಮೊಬೈಲ್ ಕೊಡಿಸಲು ನಿರಾಕರಿಸುತ್ತಾ ಬಂದಿದ್ದರು. ಇದೇ ವಿಷಯವಾಗಿ ಇಬ್ಬರ ನಡುವೆ ತೀವ್ರ ಜಗಳ ನಡೆದಿದೆ. ಜಗಳದ ನಂತರ ಮನನೊಂದ ಊರ್ಮಿಳಾ, ಭವನ್‌ಪುರದಲ್ಲಿರುವ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಪ್ರಸ್ತುತ ಮೊಡಾಸಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಂದು ಸಣ್ಣ ಹಠ ಮತ್ತು ಆವೇಶದ ನಿರ್ಧಾರ ಒಂದು ಸಂಸಾರವನ್ನೇ ಬೀದಿಗೆ ತಂದಿದೆ.