ಮೊದಲ‌ ಹಂತದ KIADB ಭೂಸ್ವಾಧೀನ ಪ್ರಕ್ರಿಯೆ ಸಭೆ; ನಿಖರ ಬೆಲೆ ನಿಗದಿ ಸಂಬಂಧ ಭಾರೀ ಗೊಂದಲ; ರೈತರು, ಅಧಿಕಾರಿಗಳ ಮಧ್ಯೆ ವಾಗ್ವಾದ; ಸಭೆ ವಿಫಲ

KIADB ಭೂಸ್ವಾಧೀನಕ್ಕೆ‍ ಸಂಬಂಧಿಸಿ ಬುಧವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇಲ್ಲಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಕುಂದಾಣ ಹೋಬಳಿ ರೈತರ‌ ಸಭೆಯು ಗದ್ದಲ, ಗಲಾಟೆಗೆ ಕಾರಣವಾಗಿ‌ ವಿಫಲವಾಯಿತು.

ಮೊದಲ‌ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕುಂದಾಣ ಹೋಬಳಿಯ ಅರುವನಹಳ್ಳಿ, ಭೈರದೇನಹಳ್ಳಿ, ಚಪ್ಪರಹಳ್ಳಿ ಹಾಗೂ ದೊಡ್ಡ ಗೊಲ್ಲಹಳ್ಳಿ ಗ್ರಾಮದಲ್ಲಿ 867 ಎಕರೆ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದೆ.‌

ಕೆಐಎಡಿಬಿ ಖರೀದಿಸುವ ಭೂಮಿ‌ಗೆ ನಿಖರ ಬೆಲೆ ನಿಗದಿಪಡಿಸುವ ಸಂಬಂಧ ಜಿಲ್ಲಾಧಿಕಾರಿ ಆರ್.ಲತಾ ಅವರು ಕೆಐಎಡಿಬಿ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದಿದ್ದರು.

ಸಭೆ ಆರಂಭವಾಗುತ್ತಲೇ ರೈತರಲ್ಲೇ ಎರಡು ಗುಂಪುಗಳಾಯೊತು. ಕೆಲ ರೈತರು ಭೂಸ್ವಾಧೀನ ವಿರೋಧಿಸಿದರೆ, ಮತ್ತೆ ಕೆಲವರು ದುಬಾರಿ ಪರಿಹಾರ ನೀಡಿದರೆ ಮಾತ್ರ ಭೂಮಿ ನೊಡುವುದಾಗಿ ಹೇಳಿದರು. ಆಗ ರೈತರ ನಡುವೆಯೇ ವಾಗ್ವಾದ, ಜಟಾಪಟಿ‌ ಆರಂಭವಾಯಿತು.

ಪರಿಸ್ಥಿತಿ‌ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ರೈತರ ಗದ್ದಲದ‌ ಮಧ್ಯೆಯೇ ಅಧಿಕಾರಿಗಳು‌ ಸಭೆಯಿಂದ ಹೊರನಡೆದರು.

ಎಕರೆಗೆ 3 ಕೋಟಿ ಪರಿಹಾರ ಆಗ್ರಹ

ಹೋಬಳಿಯ ವ್ಯಾಪ್ತಿಯ ಬಹುತೇಕ ರೈತರು ಭೂಮಿ ‌ನೀಡಲು‌ ನಿರಾಕರಿಸಿದರು. ಮತ್ತೆ ಬೆರಳೆಣಿಕೆ ರೈತರು ಎಕರೆಗೆ 3 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಇದೇ ವಿಷಯಕ್ಕೆ ರೈತರ‌ ನಡುವೆ ವಾಗ್ವಾದ ನಡೆಯಿತು.

ಅಧಿಕಾರಿಗಳು ಯಾವುದೇ ನಿರ್ಧಾರ ಪ್ರಕಟಿಸದೇ ಸಭೆಯಿಂದ ಹೊರನಡೆದ‌ ಕ್ರಮ‌ ಖಂಡಿಸಿ ರೈತರು‌ ಡಿಸಿ ಕಚೇರಿ‌ ಎದುರು‌ ಪ್ರತಿಭಟನೆ ನಡೆಸಿದರು.
ಸಭೆಯಲ್ಲಿ ಕೆಐಎಡಿಬಿ ವಿಶೇಷ ಭೂಸ್ವಾಧೀನಕಾರಿ ಬಾಳಪ್ಪ ಹಂದಿಗುಂದ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *