ದೊಡ್ಡಬಳ್ಳಾಪುರ: ಇದೇ ಮೊದಲ ಬಾರಿಗೆ ತಾಲೂಕಿನ ಹಾದ್ರೀಪುರ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿ ಯಶಸ್ವಿಗೊಳಿಸಲಾಗಿದೆ. ಗ್ರಾಮದ ಯುವಕರೆಲ್ಲಾ ಸೇರಿ ಕ್ರಿಕೆಟ್ ಟೂರ್ನಮೆಂಟ್ ಏರ್ಪಡಿಸಲಾಗಿತ್ತು. ಎರಡು ದಿನದ ಕಾಲ ಟೂರ್ನಮೆಂಟ್ ನಡೆದಿದ್ದು, ಆಟದಲ್ಲಿ ಒಟ್ಟು 50 ಜನ ಆಟಗಾರರು ಭಾಗವಹಿಸಿದ್ದರು. ಭಜರಂಗಿ, ಜೈಭೀಮ್, ರಾಯಲ್ ಸ್ಟ್ರಾಂಗ್, ಎಬಿಡಿ, ಚೇಸಿಂಗ್ ಕಿಂಗ್ಸ್ ಹೀಗೆ ಒಟ್ಟು 5 ತಂಡಗಳು ಭಾಗವಹಿಸಿದ್ದವು.
ಯುವಕರಿಗೆ ಪ್ರೋತ್ಸಾಹ
ಗ್ರಾಮದ ಪ್ರತಿಯೊಬ್ಬ ಯುವಕರನ್ನು ಒಗ್ಗೂಡಿಸಿಕೊಂಡು ಆಟ ಆಡಲಾಯಿತು. ಐಪಿಎಲ್ ಮಾದರಿಯಲ್ಲಿ ಆಟಗಾರರನ್ನು ಸೆಲೆಕ್ಟ್ ಮಾಡಲಾಯಿತು. ಸಣ್ಣ ಸಣ್ಣ ಮಕ್ಕಳನ್ನು ಸೇರಿಸಿಕೊಂಡು, ಯುವಕರಿಗೆ ಚಿಕ್ಕವಯಸ್ಸಿನಲ್ಲಿಯೇ ಕ್ರೀಡೆಯ ಬಗ್ಗೆ ಉತ್ಸಾಹ ಬರುವಂತೆ ಪ್ರೋತ್ಸಾಹ ನೀಡಲಾಯಿತು. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಪ್ರೋತ್ಸಾಹ ಕಡಿಮೆ ಆಗುತ್ತಿರುವ ಹಿನ್ನೆಲೆ ಈ ರೀತಿಯ ಕ್ರೀಡೆಗಳ ಆಯೋಜನೆ ಯುವಕರನ್ನು ಕ್ರೀಡೆಗಳತ್ತ ಸೆಳೆಯಲಾಗುತ್ತಿದೆ.
ಒಟ್ಟು ಐದು ತಂಡಗಳ ನೇರ ಹಣಾಹಣಿಯ ನಡುವೆ ರಾಯಲ್ ಸ್ಟ್ರಾಂಗ್ ಬಾಯ್ಸ್ ವಿಜೇತರಾದರು, ಎಬಿಡಿ ಸ್ಟ್ರೈಕರ್ಸ್ ತಂಡ ದ್ವಿತೀಯ ಸ್ಥಾನ ಪಡೆದು ಟೂರ್ನಿಗೆ ತೆರೆ ಎಳೆದರು.
ಈ ವೇಳೆ ಹರ್ಷ ಎಂ, ಕಾಂತರಾಜ್, ಮಂಜಣ್ಣ, ಶ್ರೀಧರ್ ಹೆಚ್ ಆರ್, ಬೈಲಪ್ಪ ಎಚ್ ಎಂ, ಚನ್ನಮುನಿಯಪ್ಪ ಸಿ, ಶ್ರೀಧರ್ ಎಂ, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.