
ದೊಡ್ಡಬಳ್ಳಾಪುರ : ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಐತಿಹಾಸಿಕ ಸಾಧನೆಯನ್ನ ಮಾಡಿದ್ದಾರೆ.
ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 22 ರಿಂದ 25ರವರೆಗೂ ನಡೆದ ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರದ ಕ್ರೀಡಾಪಟುಗಳಾದ ದಿವ್ಯ.ವಿ, ಪ್ರಣತಿ, ನಿತಿನ್ ಗೌಡ.ಎಂ, ರುಕ್ಸಾರ್ ವಿವಿಧ ಅಥ್ಲೆಟಿಕ್ ವಿಭಾಗದಲ್ಲಿ ಪದಕ ಗೆದ್ದು ಸಾಧನೆಯನ್ನ ಮಾಡಿದ್ದಾರೆ.
ನಿತಿನ್ ಗೌಡ.ಎಂ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನವನ್ನ ಪಡೆದ ಅವರು 47.9 ಸೆಕೆಂಡ್ ನಲ್ಲಿ ಓಡುವ ಮೂಲಕ ತನ್ನ ಹಳೇ ದಾಖಲೆಯನ್ನ (48.7) ಮುರಿದಿದ್ದಾರೆ. 4×400 ಮೀಟರ್ ರಿಲೇ ಸ್ವರ್ಥೆಯಲ್ಲಿ 3.16 ಸೆಕೆಂಡ್ ನಲ್ಲಿ ಓಡುವ ಮೂಲಕ ನೂತನ ಕೂಟ ದಾಖಲೆಯನ್ನ ಮಾಡಿದ್ದಾರೆ.
ದಿವ್ಯ.ವಿ, ಪ್ರಣತಿ, ರುಕ್ಸರ್ 4X400 ಮೀಟರ್ ರಿಲೇ ಸ್ವರ್ಥೆಯಲ್ಲಿ ದ್ವಿತೀಯಾ ಸ್ಥಾನವನ್ನ ಪಡೆದಿದ್ದಾರೆ. ವಿಜೇತ ಕ್ರೀಡಾಪಟುಗಳು ಸ್ವೋರ್ಟ್ಸ್ ಕ್ಲಬ್ ದೊಡ್ಡಬಳ್ಳಾಪುರದ ಆನಂದ ಭೈರವರವರಿಂದ ತರಬೇತಿಯನ್ನ ಪಡೆಯುತ್ತಿದ್ದಾರೆ.
ದಸರಾ ಕ್ರೀಡಾಕೂಟದ ಪದಕ ವಿಜೇತ ಕ್ರೀಡಾಪಟುಗಳಿಗೆ ಪೋಷಕರು, ತರಬೇತಿದಾರರು ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.