ಕೋಲಾರ: ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಮುಖಂಡರ ನಾಯಕತ್ವದ ವಿರುದ್ದ ಬೇಸತ್ತು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆಂದಟ್ಟಿ ಎ.ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಹೊರತು ಯಾವುದೇ ಹಣದ ಆಮಿಷಗಳಿಗೆ ಒಳಗಾಗಿ ಪಕ್ಷಕ್ಕೆ ಬಂದಿಲ್ಲ ಆಮಿಷಗಳಿಂದ ಪಕ್ಷ ಸೇರ್ಪಡೆ ಏನಾದರೂ ಇದ್ದರೆ ಅದು ಮೈತ್ರಿ ಪಕ್ಷದಲ್ಲಿ ಮಾತ್ರವೇ ಎಂದು ಬಣಕನಹಳ್ಳಿ ನಟರಾಜ್ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾಂಡಹಳ್ಳಿ ಮುರಳಿ ಟಾಂಗ್ ನೀಡಿದ್ದಾರೆ
ಈ ಕುರಿತು ಪತ್ರಿಕ ಹೇಳಿಕೆ ನೀಡಿದ ಅವರು ಅಧಿಕಾರದ ಆಸೆ ಆಮಿಷಗಳಿಗೆ ಸೇರ್ಪಡೆ ಮಾಡಿಕೊಳ್ಳುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ನೂತನ ಅಧ್ಯಕ್ಷ ಶಿವಕುಮಾರ್ ಅವರ ಹಿನ್ನಲೆಯನ್ನು ತಿಳಿದು ಬಣಕನಹಳ್ಳಿ ನಟರಾಜ್ ಮಾತನಾಡಬೇಕು ಅವರ ರಾಜಕೀಯ ಜೀವನದಲ್ಲಿ ಯಾವತ್ತೂ ಅಧಿಕಾರ ಹಣದ ಆಮಿಷಗಳಿಗೆ ಒಳಗಾಗುವ ವ್ಯಕ್ತಿಯಲ್ಲ ಮೈತ್ರಿ ಪಕ್ಷದಲ್ಲಿನ ನಾಯಕರು ಮುಖಂಡರು ವರ್ತನೆ ಸರಿ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಸೇರ್ಪಡೆಯಾಗಿದ್ದಾರೆ ಮೂರು ಬಾರಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ಸಾಧ್ಯವಾದಷ್ಟು ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡಿದ್ದಾರೆ ಅಂತಹವರಿಗೆ ಅವಕಾಶ ಸಿಗಲಿಲ್ಲ ಕಾಂಗ್ರೆಸ್ ಪಕ್ಷವು ಅವರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ
ಕಾಂಗ್ರೆಸ್ ಪಕ್ಷವು ಯಾವತ್ತೂ ಕೂಡ ತಾಲೂಕು ಸೊಸೈಟಿ, ಪಿಎಲ್ಡಿ ಬ್ಯಾಂಕ್, ಮತ್ತು ಸಹಕಾರಿ ಸಂಸ್ಥೆಗಳ ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಂಡು ಇರಲಿಲ್ಲ ಕೋಲಾರದಲ್ಲಿ ಶಾಸಕರಾಗಿ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿಯಾಗಿ ಅನಿಲ್ ಕುಮಾರ್ ಅವರು ಬಂದ ನಂತರದಲ್ಲಿ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಹೋರಾಟ ಮಾಡಿ ಮೈತ್ರಿ ಪಕ್ಷಗಳ ಮಧ್ಯೆ ಗೆಲ್ಲಿಸಿಕೊಂಡಿದ್ದಾರೆ ಹಿಂದಿನ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಅವಿರೋಧ ಅಂತ ಹೇಳಿ ಬಲಿಷ್ಠ ವ್ಯಕ್ತಿಗಳನ್ನು ಚುನಾವಣಾ ಕಣದಿಂದ ಸರಿಸಿದ್ದರು ಇಲ್ಲದೇ ಹೋಗಿದ್ದರೆ ತಾಲೂಕು ಸೊಸೈಟಿಯಲ್ಲಿ ಸಹ ಕಾಂಗ್ರೆಸ್ ಪಕ್ಷವು ಕೈಹಿಡಿಯುತ್ತಿದ್ದರು ಎಂಬುದನ್ನು ಮೈತ್ರಿ ಪಕ್ಷದ ಮುಖಂಡರಿಗೆ ಮನವರಿಕೆಯಾಗಬೇಕು ಎಂದರು
ಸುಮಾರು ಹತ್ತು ವರ್ಷಗಳ ಕಾಲ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವರ್ತೂರ್ ಪ್ರಕಾಶ್ ಶಾಸಕರಾಗಿ ಸಚಿವರಾಗಿದ್ದ ಸಂದರ್ಭದಲ್ಲಿ ಯಾವತ್ತೂ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಲಿಲ್ಲ ಮಾಜಿ ಸಚಿವರಾದ ಸಿ.ಬೈರೇಗೌಡರು ಹಾಗೂ ಕೆ ಶ್ರೀನಿವಾಸಗೌಡರು ಸಹಕಾರಿ ವ್ಯವಸ್ಥೆಗೆ ಹಾಕಿದ ಅಡಿಪಾಯದಲ್ಲಿ ಜೆಡಿಎಸ್ ನವರು ಗೆದ್ದು ಬೀಗುತ್ತಿದ್ದಾರೆ ಇದು ಇವತ್ತಿನ ಜೆಡಿಎಸ್ ನಲ್ಲಿರುವ ಸಿಎಂಆರ್ ಶ್ರೀನಾಥ್ ಹಾಗೂ ಇನ್ನಿತರ ಮುಖಂಡರು ಹಾಗೂ ಪರದೆ ಹಿಂದೆ ಮುಖವಾಡ ಹಾಕಿಕೊಂಡು ಇರುವವರ ಮುಖಂಡರ ಗೆಲುವು ಅಲ್ಲ ಇವತ್ತು ಮೈತ್ರಿಯಾಗಿ ಅಭ್ಯರ್ಥಿಯಾಗಿ ಪೈಪೋಟಿಯನ್ನು ನೀಡಿದ್ದರೂ ಕಾಂಗ್ರೆಸ್ ಹೆಚ್ಚು ಸ್ಥಾನಗಳು ಪಡೆಯಲು ಸಾಧ್ಯವಾಯಿತು ಮೂರು ಪಕ್ಷಗಳು ಏಕಾಂಗಿಯಾಗಿ ಸ್ಪರ್ಧೆಯಲ್ಲಿ ಇದ್ದಿದ್ದರೆ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತಿತ್ತು ಆರೋಪ ಮಾಡುವ ಸಂದರ್ಭದಲ್ಲಿ ತಮ್ಮ ಮೈತ್ರಿ ಪಕ್ಷದ ನಡುವಳಿಕೆ ಬಗ್ಗೆ ಅತ್ಮವಿಮರ್ಶೆ ಮಾಡಿಕೊಳ್ಳುವುದು ಸೂಕ್ತ ಎಂದು ಮೈಲಾಂಡಹಳ್ಳಿ ಮುರಳಿ ಹೇಳಿಕೆ ನೀಡಿದ್ದಾರೆ.