ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜನ ಸಾಮಾನ್ಯರ ಅನುಕೂಲಕ್ಕಾಗಿ “ಮಾಂಗಲ್ಯ ಭಾಗ್ಯ” ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಮೇ.7ರಂದು ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಯೋಜನೆ ಮಾಡಲಾಗಿದೆ.
ಮಾಂಗಲ್ಯ ಭಾಗ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವರನಿಗೆ 5 ಸಾವಿರ ರೂ. ಹಾಗೂ ವಧುವಿಗೆ 10ಸಾವಿರ ರೂ. ಜೊತೆಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ರೂ. 48,000/- ಮೌಲ್ಯದ್ದು) ಹೀಗೆ ಒಟ್ಟು 63 ಸಾವಿರ ರೂ.ಗಳನ್ನು ಅಭಿವೃದ್ಧಿ ಪ್ರಾಧಿಕಾರ ನಿಧಿಯಿಂದ ಭರಿಸಲಾಗುತ್ತದೆ.
ಸಾಮೂಹಿಕ ಸರಳ ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಾಡಲಾಗುತ್ತದೆ.
ಮೇ.7ರಂದು ನಡೆಯಲಿರುವ ಮಾಂಗಲ್ಯ ಭಾಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಅರ್ಜಿಯನ್ನು ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳ ಕಚೇರಿಯಲ್ಲಿ ಪಡೆದು ನಿಗದಿತ ದಿನಾಂಕದೊಳಗೆ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ.
ಪ್ರಮುಖ ದಿನಾಂಕಗಳು
- ಮಾರ್ಚ್ 31ಕ್ಕೆ ವಧು-ವರರು ನೋಂದಾಯಿಸಿಕೊಳ್ಳಲು ಕಡೆಯ ದಿನವಾಗಿರುತ್ತದೆ.
- ಏಪ್ರಿಲ್ 10ರಂದು ನೋಂದಾಯಿಸಿಕೊಂಡಿರುವ ವಧು-ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸಲಾಗುತ್ತದೆ.
- ಏಪ್ರಿಲ್ 20ರಂದು ವಧು-ವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಡೆಯ ದಿನವಾಗಿರುತ್ತದೆ.
- ಏಪ್ರಿಲ್.25ರಂದು ಅಂತಿಮ ವಧು-ವರರ ಪಟ್ಟಿ ಪ್ರಕಟಿಸಲಾಗುತ್ತದೆ.
- ಮೇ.7ರ ಬೆ. 11-00 ರಿಂದ 12-00 ರವರೆಗೆ ಕಟಕ ಲಗ್ನದಲ್ಲಿ ವಿವಾಹ ನಡೆಯುತ್ತದೆ.
ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕಾದ ದೃಢೀಕೃತ ದಾಖಲೆ ವಿವರ
- ವಧು / ವರರ ಪಾಸ್ ಪೋರ್ಟ್ ಅಳತೆಯ ಫೋಟೋಗಳು 2+2
- ವಧು / ವರರ ವಯಸ್ಸಿನ ಬಗ್ಗೆ ದಾಖಲೆಗಳ 4+4 ಪ್ರತಿಗಳು(ಜನನ ಪ್ರಮಾಣ ಪತ್ರ / ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಪ್ರತಿ)
- ವಧು / ವದರ ವಾಸ ಸ್ಥಳದ ಬಗ್ಗೆ ಅಧಿಕೃತ ದಾಖಲೆಗಳ 4+4 ಪ್ರತಿಗಳು (ಪಡಿತರ ಚೀಟಿ ನಕಲು)
- ಅವಿವಾಹಿತರೆನ್ನುವ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು / ಪಿ.ಡಿ.ಒ. / ನಗರಸಭೆ / ಪುರಸಭೆ / ಮಾಹಾನಗರ ಪಾಲಿಕೆಯಿಂದ ಪತ್ರಗಳ(1+1 ಪ್ರತಿಗಳು)
- ವಿವಾಹವಾಗುವ ವಧು / ವರರ ಚುನಾವಣಾ ಗುರುತಿನ ಚೀಟಿ / ಆಧಾರ್ ಕಾರ್ಡ್ (4+4 ನಕಲು ಪ್ರತಿಗಳು)
- ವಿವಾಹವಾಗುವ ವಧು / ವರರ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ನಕಲು ಪ್ರತಿಗಳು
- ವಧು / ವರರ ತಂದೆ ತಾಯಿಯರು ನಿಧನರಾಗಿದ್ದಲ್ಲಿ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಒದಗಿಸತಕ್ಕದ್ದು
- ವಧು / ವರರ ತಂದೆ ತಾಯಿಯರ / ಪೋಷಕರ ಗುರುತಿನ ಚೀಟಿ ( ಚುನಾವಣಾ ಗುರುತಿನ ಚೀಟಿ / ಆಧಾರ್ ಕಾರ್ಡ್ ಹಾಗೂ ಸರ್ಕರ ನೀಡಿರುವ ಅಧಿಕೃತ ದಾಖಲೆಗಳು)