ಮೇಕೆ ಕಳ್ಳರ‌ ಬಂಧನ: ಬಂಧಿತರಿಂದ ನಾಲ್ಕು ಮೇಕೆಗಳು, ಒಂದು ಬೈಕ್ ವಶ

ಕೋಲಾರ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಜಾನುವಾರು ಕಳ್ಳರ ಉಪಟಳ ಹೆಚ್ಚಾಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಬೆಲೆ ಬಾಳುವ ಮೇಕೆಗಳನ್ನ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಈ ಕುರಿತು ಮೇಕೆ ಕಳೆದುಕೊಂಡ ರೈತ ವೇಮಗಲ್ ಪೊಲೀಸ್ ಠಾಣಾಗೆ ದೂರು ನೀಡಿದ್ದರು. ಈ ಹಿನ್ನೆಲೆ ವೇಮಗಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಜಾನುವಾರು ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿರುತ್ತಾರೆ. ಬಂಧಿತರಿಂದ ನಾಲ್ಕು ಮೇಕೆಗಳು, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಅದೇ ರೀತಿ ಇತ್ತೀಚೆಗೆ ಶ್ರೀನಿವಾಸಪುರ ತಾಲೂಕಿನ ಕುಳಿಗುರ್ಕಿ ಎಂಬ ಗ್ರಾಮದ ಮುನಿರೆಡ್ಡಿ ರವರ ಕುರಿಗಳು ಕಳ್ಳತನವಾಗಿತ್ತು. ಈ ಕುರಿತು ಶ್ರೀನಿವಾಸಪುರ ಠಾಣೆಯಲ್ಲಿ ದೂರನ್ನು ನೀಡಿರುತ್ತಾರೆ, ಈ ವಿಚಾರವಾಗಿ PI ರವರು ಹಾಗೂ ಅವರ ಸಿಬ್ಬಂದಿ ವರ್ಗದವರು 3 ಜನ ಕುರಿ ಕಳ್ಳರನ್ನ ಪತ್ತೆ ಹಚ್ಚಿ ಸುಮಾರು 70 ಸಾವಿರ ಬೆಲೆ ಬಾಳುವ ಆರು ಕುರಿಗಳನ್ನು ವಶಕ್ಕೆ ಪಡೆದಿರುತ್ತಾರೆ.

Leave a Reply

Your email address will not be published. Required fields are marked *