ಕಳೆದೊಂದು ತಿಂಗಳಿಂದ ವಿಶ್ವದೆಲ್ಲೆಡೆ ಫಿಫಾ ಫುಟ್ಬಾಲ್ ವಿಶ್ವಕಪ್ ಜ್ವರ ಹೆಚ್ಚಾಗಿದ್ದು ಎಲ್ಲಾ ರಾಷ್ಟ್ರಗಳಲ್ಲಿಯೂ ಫುಟ್ಬಾಲ್ ಪ್ರೇಮಿಗಳು ತಮ್ಮ ನೆಚ್ಚಿನ ತಂಡ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿದ್ದರು.
ಅಜೆ೯ಂಟೈನಾ ಅಭಿಮಾನಿಗಳು ತುಸು ಹೆಚ್ಚೇ ಪ್ರಾರ್ಥನೆ ಸಲ್ಲಿಸಿದ್ದರು ಕಾರಣ ಮೆಸ್ಸಿ, ವಿಶ್ವ ಶ್ರೇಷ್ಠ ಆಟಗಾರನ ಕೊನೆಯ ವರ್ಲ್ಡ್ ಕಪ್ ಇದಾಗಿದ್ದು ಗೆಲುವಿನ ವಿದಾಯ ಹೇಳುವುದು ವಿಶ್ವದ ಎಲ್ಲಾ ಫುಟ್ಬಾಲ್ ಪ್ರೇಮಿಗಳ ಕನಸಾಗಿದ್ದು ಇದೀಗ ನನಸಾಗಿದೆ.
ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಸೌದಿ ಅರೇಬಿಯಾದ ವಿರುದ್ಧ ಸೊಲುವ ಮೂಲಕ ತನ್ನ ಅಭಿಯಾನ ಆರಂಭಿಸಿದ ಅಜೆ೯ಂಟೈನಾ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ಗೆದ್ದು ಟ್ರೋಫಿಗೆ ಮುತ್ತಿಟ್ಟಿದೆ.
ನಿಗದಿತ ಸಮಯದಲ್ಲಿ ಸಮಬಲ ಸಾಧಿಸಿದ ಎರಡೂ ತಂಡಗಳು 3-3 ಗೋಲುಗಳನ್ನುಗಳಿಸಿದರು, ಹೆಚ್ಚುವರಿ 30 ನಿಮಿಷದಲ್ಲಿ ಅಜೆ೯ಂಟೈನಾ ಪರವಾಗಿ ಮೆಸ್ಸಿ ಹಾಗೂ ಫ್ರಾನ್ಸ್ ಪರವಾಗಿ ಎಂಬಾಪೆ ಮತ್ತೊಂದು ಗೋಲು ಬಾರಿಸುವ ಮೂಲಕ ಅಭಿಮಾನಿಗಳ ಕಾತರವನ್ನು ಮತ್ತಷ್ಟು ಹೆಚ್ಚಿಸಿದರು.
ಫಲಿತಾಂಶಕ್ಕಾಗಿ ಎರಡು ತಂಡಗಳಿಗೆ ಪೆನಾಲ್ಟಿ ಅವಕಾಶ ನೀಡಲಾಯಿತು, ಅಜೆ೯ಂಟೈನಾ 4 ಹಾಗೂ ಫ್ರಾನ್ಸ್ 2 ಗೋಲು ಬಾರಿಸುವ ಮೂಲಕ ಅಜೆ೯ಂಟೈನಾ ಮೂರನೇ ಬಾರಿಗೆ ಫಿಫಾ ಫುಟ್ಬಾಲ್ ವಿಶ್ವಕಪ್ ತನ್ನದಾಗಿಸಿಕೊಂಡಿತು.
ಫಿಫಾ ವಿಶ್ವಕಪ್ ಅಜೆ೯ಂಟೈನಾ ತಂಡಕ್ಕೆ 347 ಕೋಟಿ ರೂಪಾಯಿ ಹಾಗೂ ರನ್ನರ್ ಅಪ್ ಫ್ರಾನ್ಸ್ 248 ಕೋಟಿ ರೂಪಾಯಿ ನಗದು ಬಹುಮಾನ ಸಿಕ್ಕಿದ್ದು ವಿಶ್ವ ಶ್ರೇಷ್ಠ ಆಟಗಾರ ಲಿಯೋನಲ್ ಮೆಸ್ಸಿ ಗೌರವಯುತ ಗೆಲುವು ಸಾಧಿಸುವ ಮೂಲಕ ಫುಟ್ಬಾಲ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದ್ದಾರೆ.