ಮೆಡಿಕವರ್‌ ಹಾಸ್ಪಿಟಲ್: ರೋಬೋಟಿಕ್ ಪೆಲ್ವಿಕ್ ಎಕ್ಸೆನ್ತರೇಶನ್ ಶಸ್ತ್ರಚಿಕಿತ್ಸೆಯಿಂದ ರೋಗಿಯ ಆರೋಗ್ಯ ಸುಧಾರಣೆ

ವೈಟ್‌ ಫೀಲ್ದ್‌, ಬೆಂಗಳೂರು : ಬೇರೆ ಬೇರೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಮೆಡಿಕವರ್‌ ಆಸ್ಪತ್ರೆಯಲ್ಲಿರುವ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ತಿಳಿದ ಕೋಲ್ಕತ್ತಾ ಮೂಲದ ರೋಗಿಯೂ , ಇಲ್ಲೆ ಬಂದು ರೊಬೊಟಿಕ್‌ ಸರ್ಜರಿ ಮಾಡಿಕೊಂಡು ನಾಲ್ಕೆ ದಿನದಲ್ಲೆ ಹುಷಾರಾಗಿ ಮನೆಗೆ ತೆರಳಿದ್ದಾರೆ.

46 ವರ್ಷದ ಮಹಿಳೆಗೆ ಕಳೆದ ಏಳು ತಿಂಗಳಿನಿಂದ ಮೂತ್ರ ಮಾಡುವಾಗ ರಕ್ತ ಸ್ರಾವ ವಾಗುತ್ತಾ ಇತ್ತು . ಮೂತ್ರವಿಸರ್ಜನೆ ಮಾಡುವ ರಕ್ತಸ್ರಾವವಾಗುತ್ತಾ(ಹೆಮ್ಯಾಚುರಿಯಾ) ಇತ್ತು . ರಕ್ತಸ್ರಾವಕ್ಕೆ ಕಾರಣವೇನೆಂದು ತಿಳಿಯಲು ಸ್ಥಳೀಯ ವೈದ್ಯರ ಬಳಿ ಪರೀಕ್ಷೆ ಮಾಡಿದಾಗ, ಸಿಟಿ ಸ್ಯಾನ್‌ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ . ಆದ್ರೆ ಅದನ್ನು ರೋಗಿಯೂ ಸಂಪೂರ್ಣವಾಗಿ ನೀರ್ಲಕ್ಷ್ಯ ಮಾಡಿದ್ರೂ . ದಿನೇ ದಿನೇ ಮೂತ್ರ ವಿಸರ್ಜನೆ ಮಾಡುವಾಗ ರಕ್ತಸ್ರಾವ ಜಾಸ್ತಿಯಾಗ್ತಾ ಇತ್ತು . ಬಳಿಕ ಅವರು ಸಿಟಿ ಸ್ಕಾನ್‌ ಮಾಡಿದಾಗ ಬ್ಲಾಡರ್‌ ನಲ್ಲಿ ಟ್ಯೂಮರ್‌ ಇರೋದು ಪತ್ತೆಯಾಗಿದೆ . ಹಾಗಾಗೀ ಬೆಂಗಳೂರಿನ ಮೆಡಿಕವರ್‌ ಆಸ್ಪತ್ರೆಗೆ ಬಂದು ರೋಬೋಟಿಕ್‌ ಸರ್ಜನ್‌ ಡಾ. ಪ್ರಮೋದ್‌ ಅವರನ್ನು ಭೇಟಿ ಮಾಡಿ ಬಯೋಸ್ಪಿ ನಡೆಸಿದ್ರೂ. ಆಗ ಯೂರಿನ್‌ ಚೀಲದಿಂದ ಗರ್ಭಕೋಶಕ್ಕೆ ಕ್ಯಾನ್ಸರ್‌ ಹರಡಿದೆ ಅನ್ನೋದು ತಿಳಿದುಬಂದಿದೆ.

ರೊಬೊಟಿಕ್‌ ಸರ್ಜರಿ ನಡೆಸಿದರೇ ಉತ್ತಮವೆಂದು ತಿಳಿದ ರೋಗಿಯೂ, ಮೆಡಿಕವರ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿಕೊಂಡರು.ಬ್ಲಾಡರ್‌ ಹಾಗೂ ಗರ್ಭಕೋಶ ಎರಡನ್ನು ತೆಗೆಯಬೇಕಾದ ಕಾರಣ, ಈ ಸರ್ಜರಿ ಸ್ವಲ್ಪ ರಿಸ್ಕಿ ಯಾಗಿತ್ತು. ಹಾಗಾಗೀ ರೋಗಿಗೆ ಪೆಲ್ವಿಕ್ ಎಕ್ಸೆನ್ತರೇಶನ್( ಗರ್ಭಕೋಶ ಹಾಗೂ ಬ್ಲಾಡರ್‌ ನಲ್ಲಿರುವ ಕ್ಯಾನ್ಸರ್‌ ತೆಗೆದು ಹಾಕುವ) ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನುಮಾಡಲಾಯ್ತು.
ಯೂರಿನ್‌ ಬ್ಲಾಡರ್‌ ಹಾಗೂ ಗರ್ಭಕೋಶವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿತ್ತು. ಬಳಿಕ ಮೂತ್ರವಿಸರ್ಜನಗೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿ ಅಪರೇಷನ್‌ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಅವರಿಗೆ ಹಿಮೋಗ್ಲೀಬಿನ್‌ ಸ್ವಲ್ಪ ಕಡಿಮೆ ಇತ್ತು . ಅದಕ್ಕಾಗಿ ಸೂಕ್ತ ಚಿಕಿತ್ಸೆ ನೀಡಿ ನಾಲ್ಕು ದಿನಗಳ ಬಳಿಕ ರೋಗಿಯನ್ನು ಆರೋಗ್ಯಕರವಾಗಿ ಮನೆಗೆ ಕಳಿಸಿಕೊಡಲಾಗಿತ್ತು.

ರೋಬೊಟಿಕ್‌ ಸರ್ಜರಿ ನಡೆಸಿದರೇ ರಿಕವರಿ ಟೈಮ್‌ ಬಹಳ ಕಡಿಮೆ ಇರುತ್ತದೆ. ನಾಲ್ಕೇ ದಿನದಲ್ಲಿ ರೋಗಿಯೂ ರಿಕವರಿ ಆಗಿ ಮನೆಗೆ ತೆರಳಿದ್ದಾರೆ. ನಾರ್ಮಲ್‌ ಶಸ್ತ್ರಚಿಕಿತ್ಸೆ ನಡೆದರೇ ರಿಕವರಿ ಟೈಮ್‌ ಒಂದುತಿಂಗಳು ಬೇಕಾಗುತ್ತದೆ ಎಂದು ರೋಬೋಟಿಕ್‌ ಸರ್ಜನ್‌ ಡಾ . ಪ್ರಮೋದ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!