ಮೆಡಿಕವರ್‌ ಆಸ್ಪತ್ರೆ ವತಿಯಿಂದ ಚೈತ್ಯನ್ಯ ಬಡಾವಣೆಯಲ್ಲಿ ನಿವಾಸಿಗಳಿಗೆ ಬ್ಯಾಡ್ಮಿಂಟನ್‌ ಮತ್ತು ‌ಉಚಿತ ಆರೋಗ್ಯ ತಪಾಸಣೆ

ಬೆಂಗಳೂರು ವೈಟ್‌ ಫೀಲ್ದ್‌ – ಚೈತನ್ಯ ಸಮರ್ಪಣ ಮತ್ತು ಚೈತನ್ಯ ಸ್ಮರಣ ಬಡಾವಣೆಯಲ್ಲಿ ಮೆಡಿಕವರ್‌ ಆಸ್ಪತ್ರೆಯ ವತಿಯಿಂದ ಬ್ಯಾಡ್ಮಿಂಟನ್‌ ಲೀಗ್‌ ಅನ್ನು ಆಯೋಜಿಸಲಾಗಿತ್ತು.ಬ್ಯಾಡ್ಮಿಂಟನ್ ನಲ್ಲಿ ಗೆದ್ದವರಿಗೆ ಮಡಿಕವರ್‌ ಆಸ್ಪತ್ರೆಯ ಮುಖ್ಯಸ್ಥ ಕೃಷ್ಣಮೂರ್ತಿ ಗೋಪಾಲ್‌ ರವರು ಬಹುಮಾನ ವಿತರಣೆ ಮಾಡಿದರು.

ಚೈತನ್ಯ ಸಮರ್ಪಣ ಮತ್ತು ಚೈತನ್ಯ ಸ್ಮರಣ ಬಡಾವಣೆಗಳಿಂದ 30ಕ್ಕೂ ಹೆಚ್ಚು ಉತ್ಸಾಹಿ ಆಟಗಾರರು ಭಾಗವಹಿಸಿದ್ದರು. ಪ್ರಖ್ಯಾತ ಲೀಗ್‌ಗಳ ಶೈಲಿಯಲ್ಲಿ, ಈ ಕಾರ್ಯಕ್ರಮದಲ್ಲಿ ಪ್ಲೇಯರ್ ಹರಾಜು ಮತ್ತು ಐದು ತಂಡಗಳ ರಚನೆ ಮಾಡಲಾಯಿತು. ಸಣ್ಣ ವಯಸ್ಸಿನವರಿಂದ ಹಿಡಿದು 50 ವರ್ಷ ವಯಸ್ಸಿನವರು ಕೂಡ ಆಟದಲ್ಲಿ ಭಾಗಿಯಾಗಿದ್ದರು.

ಬೆಳಿಗ್ಗೆಯಿಂದ ಸಂಜೆವರೆಗೂ ಸುಮಾರು 65 ಪಂದ್ಯಗಳು ನಡೆದಿದ್ದು, ಟೀಮ್ ಫಿಯರ್‌ಸಿಕ್ಸ್‌ ತಂಡ ಚಾಂಪಿಯನ್ಸ್‌ ಆಗಿ ಹೊರ ಹೊಮ್ಮಿದ್ದಾರೆ. ಅದೇ ದಿನ ಬಡಾವಣೆಯಲ್ಲಿ ಎಲ್ಲರಿಗೂ ಮೆಡಿಕವರ್‌ ಆಸ್ಪತ್ರೆ ವತಿಯಿಂದ ಉಚಿತ ಹೆಲ್ತ್‌ ಚೆಕ್‌ ಕ್ಯಾಂಪ್‌ ಕೂಡ ನಡೆಸಲಾಯಿತು.

Leave a Reply

Your email address will not be published. Required fields are marked *

error: Content is protected !!