ಬೆಂಗಳೂರು, ಫೆಬ್ರವರಿ 19: ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯಲ್ಲಿ ಇಂದು ಕಿಮೋಥೆರಪಿ ಡೇ ಕೇರ್ ಸೆಂಟರ್ ಅಧಿಕೃತವಾಗಿ ಉದ್ಘಾಟನೆಯಾಯಿತು.
ಈ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಮುಖ್ಯಸ್ಥ ಮತ್ತು ಅಸೋಸಿಯೇಟ್ ಉಪಾಧ್ಯಕ್ಷ ಕೃಷ್ಣಮೂರ್ತಿ ಜಿ, ಮೆಡಿಕವರ್ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ, ನೀರಾಜ್ ಜೈಸುವಾಲ್, ವೈದ್ಯಕೀಯ ಅಧೀಕ್ಷಕಿ ಡಾ. ಶೃತಿ ಕೊಯ್ಲಿ ಮತ್ತು ಆನ್ಕೊಲೊಜಿಸ್ಟ್ ಡಾ. ಕಾಕೋಲಿ ಯವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಆಸ್ಪತ್ರೆಯ ಎಲ್ಲಾ ಹಿರಿಯ ವೈದ್ಯರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಈ ಸಮಾರಂಭದಲ್ಲಿ ಭಾಗವಹಿಸಿದರು.
ಆಸ್ಪತ್ರೆಯ ಮುಖ್ಯಸ್ಥ ಕೃಷ್ಣಮೂರ್ತಿ ಜಿ ಮಾತನಾಡಿ, ಇದು ಕೇವಲ ಒಂದು ಪ್ರಾರಂಭ ಮಾತ್ರ. ಭವಿಷ್ಯದಲ್ಲಿ ಮೆಡಿಕವರ್ ಆಸ್ಪತ್ರೆಯಲ್ಲಿ ಇನ್ನಷ್ಟು ವೈದ್ಯಕೀಯ ವಿಭಾಗಗಳು ಸ್ಥಾಪನೆಯಾಗಲಿವೆ. ನಮ್ಮ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಕ್ಷಣ ಮತ್ತು ಸೂಕ್ತ ಚಿಕಿತ್ಸೆ ದೊರೆಯುವಂತೆ ಎಲ್ಲ ಸೌಲಭ್ಯಗಳನ್ನು ನಾವು ಒದಗಿಸುವ ಭರವಸೆ ನೀಡುತ್ತೇವೆ ಎಂದು ತಿಳಿಸಿದರು.
ಮೆಡಿಕವರ್ ಗ್ರೂಪ್ CFO ಶ್ರೀ ನೀರಾಜ್ ಜೈಸುವಾಲ್ ಮಾತನಾಡಿ, ವೈಟ್‌ಫೀಲ್ಡ್‌ನಲ್ಲಿ ಮೆಡಿಕವರ್ ಆಸ್ಪತ್ರೆ ಅತ್ಯಾಧುನಿಕ ಮತ್ತು ವಿಶಾಲವಾದ ಸೌಲಭ್ಯಗಳನ್ನು ಹೊಂದಿದೆ. ಹೊಸ ಕಿಮೋಥೆರಪಿ ಡೇ ಕೇರ್ ಸೆಂಟರ್ ಮೂಲಕ ರೋಗಿಗಳಿಗೆ ಅತ್ಯುತ್ತಮ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಸುಸಜ್ಜಿತ ಕೇಂದ್ರದಿಂದ ರೋಗಿಗಳಿಗೆ ಸಮರ್ಥ ಮತ್ತು ಸುಗಮ ಚಿಕಿತ್ಸೆ ಲಭ್ಯವಾಗುವುದು ಖಚಿತ ಎಂದು ಅಭಿಪ್ರಾಯ ಪಟ್ಟರು.
ಹಿರಿಯ ಆನ್ಕೊಲೊಜಿಸ್ಟ್ ಡಾ. ಕಾಕೋಲಿ ಲಹ್ಕರ್ ಮಾತಾಡಿ, ವೈದ್ಯಕೀಯ ತಂತ್ರಜ್ಞಾನದಲ್ಲಿ ಆದ ಹೊಸ ಪ್ರಗತಿಗಳಿಂದ ಕ್ಯಾನ್ಸರ್ ಚಿಕಿತ್ಸೆಯ ಪರಿಣಾಮಕಾರಿಯಾಗಿದೆ. ಆರಂಭಿಕ ಹಂತದಲ್ಲಿ ಪತ್ತೆಯಾಗುವ ಬಹುತೇಕ ಕ್ಯಾನ್ಸರ್‌ಗಳನ್ನು ಪೂರ್ಣವಾಗಿ ಗುಣಪಡಿಸುವ ಸಾಧ್ಯತೆ ಇದೆ. ಇಂದು ಟಾರ್ಗೆಟೆಡ್ ಥೆರಪಿ ಮತ್ತು ಇಮ್ಯುನೋಥೆರಪಿ ತಂತ್ರಜ್ಞಾನದಿಂದ ಟರ್ಮಿನಲ್ ಕ್ಯಾನ್ಸರ್ ಪೀಡಿತರೂ ಹೆಚ್ಚು ವರ್ಷಗಳ ಕಾಲ ಬದುಕುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಎರಡು ದಶಕಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉನ್ನತ ಮಟ್ಟದ ಬೆಳವಣಿಗೆ ನಡೆದಿದೆ. ನಾವು ಇದನ್ನು ಮುಂದುವರಿಸಿ, ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದ ಕೊನೆಯಲ್ಲಿ, ಮೆಡಿಕವರ್ ಆಸ್ಪತ್ರೆಯ ಸಿಬ್ಬಂದಿಗಳು ಕೇಕ್ ಕತ್ತರಿಸಿ ಈ ಹೊಸ ಪ್ರಯತ್ನವನ್ನು ಸಂಭ್ರಮಿಸಿದರು.