ಮೆಡಿಕವರ್ ಆಸ್ಪತ್ರೆಯಲ್ಲಿ  ನವಜಾತ ಶಿಶು ಪುನಶ್ಚೇತನ ಕಾರ್ಯಕ್ರಮ (ಬೇಸಿಕ್ ಎನ್‌ಆರ್‌ಪಿ) ಆಯೋಜನೆ

ಬೆಂಗಳೂರು,ವೈಟ್‌ ಫೀಲ್ಡ್‌ : ಮೆಡಿಕವರ್ ಆಸ್ಪತ್ರೆ, ಬೆಂಗಳೂರು ವತಿಯಿಂದ ವೈದ್ಯರು ಮತ್ತು ನರ್ಸ್‌ ಗಳಿಗಾಗಿ ನವಜಾತ ಶಿಶು ಪುನಶ್ಚೇತನ ಕಾರ್ಯಕ್ರಮವನ್ನು (Basic NRP) ಯಶಸ್ವಿಯಾಗಿ ಆಯೋಜಿಸಲಾಯಿತು. ಈ ತರಬೇತಿ ಕಾರ್ಯಕ್ರಮವು ವೈದ್ಯಕೀಯ ವೃತ್ತಿಪರರಲ್ಲಿ ಜೀವ ರಕ್ಷಣಾ ಕೌಶಲ್ಯಗಳನ್ನು ವೃದ್ಧಿಸಲು, ಹಾಗೂ ನವಜಾತ ಶಿಶುಗಳ ಉತ್ತಮ ಆರೈಕೆಗಾಗಿ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲು ರೂಪಗೊಳಿಸಲಾಗಿದೆ.
ಈ ಕಾರ್ಯಕ್ರಮವನ್ನು ಮಕ್ಕಳ ವೈದ್ಯರಾದ ಡಾ. ಸಂಜೀವ ರೆಡ್ಡಿ, ಡಾ. ಲೀನಾತ ರೆಡ್ಡಿ, ಡಾ. ಅನುರಾಗ್ ಮಹಾಗಾಂಕಾರ ಹಾಗೂ ಮೆಡಿಕವರ್ ಆಸ್ಪತ್ರೆಯ AGM ಮೊಹಿತ್ ಅವರು ಉದ್ಘಾಟಿಸಿದರು.

ಬೇಸಿಕ್ ಎನ್‌ಆರ್‌ಪಿ ತರಬೇತಿ, ಜನನ ಕ್ಷಣದಲ್ಲೇ ಉದ್ಭವಿಸಬಹುದಾದ ತುರ್ತು ಪರಿಸ್ಥಿತಿಗಳಿಗೆ ತ್ವರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನೀಡಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ವೈದ್ಯರು ಹಾಗೂ ನರ್ಸುಗಳಿಗೆ ಒದಗಿಸುತ್ತದೆ. ಹೊಸಜಾತ ಶಿಶುಗಳ ಜೀವ ಉಳಿಸುವ ಉನ್ನತ ತಂತ್ರಗಳನ್ನು ಕಲಿಸುವ ಮೂಲಕ, ಮೆಡಿಕವರ್ ಆಸ್ಪತ್ರೆ ನವಜಾತ ಶಿಶುಗಳ ಉತ್ತಮ ಫಲಿತಾಂಶ ಮತ್ತು ಸುರಕ್ಷಿತ ಆರೈಕೆಗೆ ತನ್ನ ಬದ್ಧತೆಯನ್ನು ಮುಂದುವರೆಸುತ್ತಿದೆ.

Leave a Reply

Your email address will not be published. Required fields are marked *

error: Content is protected !!