ಕೋಲಾರ: ಮಗುವಿನ ಆರೋಗ್ಯದ ದೃಷ್ಟಿಯಿಂದ ತಾಯಿಯ ಎದೆ ಹಾಲನ್ನು ಮಗುವಿಗೆ ಕುಡಿಸಲು ಪ್ರತಿಯೊಬ್ಬ ತಾಯಂದಿರು ಮುಂದಾಗಬೇಕು ಎಂದು ಮೆಡಿಕಲ್ ಕಾಲೇಜಿನ ವೈದ್ಯ ಡಾ ನರೇಂದ್ರ ತಿಳಿಸಿದರು.
ಕೋಲಾರ ನಗರದ ಗಾಂಧಿನಗರದ ಅಂಗನವಾಡಿ ಕೇಂದ್ರದಲ್ಲಿ ಶ್ರೀ ದೇವರಾಜ್ ಅರಸು ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದಿಂದ ಮಂಗಳವಾರ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ಪ್ರಾಕೃತಿಕವಾಗಿ ದೊರೆಯುವ ಎಲ್ಲಾ ವಸ್ತುಗಳು ಸಹ ಆರೋಗ್ಯಕರವಾಗಿರುತ್ತದೆ. ಆದ್ದರಿಂದ ತಾಯಂದಿರಲ್ಲಿ ದೊರೆಯುವ ಹಾಲು ಸಹ ಅಮೃತವಿದ್ದಂತೆ ಬೆಳೆಯುವ ಮಕ್ಕಳಿಗೆ ತಾಯಿಯ ಹಾಲು ತುಂಬಾ ಮುಖ್ಯ ಎಲ್ಲರೂ ತಮ್ಮ ಮಕ್ಕಳಿಗೆ ತಮ್ಮ ಎದೆ ಹಾಲನ್ನು ನೀಡುವುದರಿಂದ ಮಕ್ಕಳ ಬೆಳವಣಿಗೆಗೆ ಕಾರಣವಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ವೈದ್ಯರಾದ ಕಾರ್ತಿಕ್, ಜಯಶ್ರೀ ನರ್ಸಿಂಗ್ ಕಾಲೇಜಿನ ಸರಿತಾ, ಕವಿತಾ, ಅಂಗನವಾಡಿ ಸಿಬ್ಬಂದಿ ಸೇರಿದಂತೆ ಬಾಣಂತಿಯರು ಕಾರ್ಯಕ್ರಮದಲ್ಲಿ ಇದ್ದು ಕಾಲೇಜಿನ ವಿಧ್ಯಾರ್ಥಿಗಳಿಂದ ಸ್ತನ್ಯಪಾನ ಅರಿವು ಕುರಿತಂತೆ ನಾಟಕವನ್ನು ಪ್ರದರ್ಶಿಸಿದರು.