ಟಾಲಿವುಡ್ ಸಿನಿರಂಗದ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮದುವೆ ಸಮಾರಂಭ. ಚಿರಂಜೀವಿ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ ಅವರ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಅವರು ಲಾವಣ್ಯ ತ್ರಿಪಾಠಿ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಪ್ರೀತಿಸಿ ಮದುವೆಯಾದ ವರುಣ್ – ಲಾವಣ್ಯ ಅವರ ವಿವಾಹ ಸಮಾರಂಭಕ್ಕೆ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಸಾಕ್ಷಿಯಾಗಿದ್ದಾರೆ. ಇಟಲಿಯ ಟಸ್ಕನಿಯಲ್ಲಿರುವ ಬೋರ್ಗೊ ಸ್ಯಾನ್ ಫೆಲಿಸ್ ರೆಸಾರ್ಟ್ ನಲ್ಲಿ ಅದ್ಧೂರಿ ವಿವಾಹ ನೆರವೇರಿದೆ.
ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್ ಸೇರಿದಂತೆ ಅನೇಕ ಸೂಪರ್ ಸ್ಟಾರ್ ಕುಟುಂಬಗಳು ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.