
ಮುಸ್ಲಿಂ ಯೂತ್ ಅಸೋಸಿಯೇಷನ್ ಗೆ ಸೆಲೆಕ್ಷನ್ ಬೇಡ, ಎಲೆಕ್ಷನ್ ಮಾಡಿ ಎಂದು ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ.
ಮುಸ್ಲಿಂ ಯೂತ್ ಅಸೋಸಿಯೇಷನ್ ಗೆ ಅಡಾಕ್ ಕಮಿಟಿ ಮಾಡುವ ಪ್ರಯತ್ನವನ್ನು ವಿರೋಧಿಸಿ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಮುಸ್ಲಿಂ ಸಮುದಾಯ 25 ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದೆ. 37 ಮಸೀದಿಗಳಿವೆ, ಎಲ್ಲಾ ಮಸೀದಿ ಮುಖಂಡರು ಸೇರಿ ಒಟ್ಟಾರೆ ಮುಸ್ಲಿಂ ಸಮುದಾಯವನ್ನು ಸೇರಿಸಿ ಮತದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸಬೇಕು ಎಂದು ಮನವಿ ಕೊಟ್ಟಿದ್ದೇವೆ, ಆದರೆ ನಗರದ ಎರಡು ವಾರ್ಡ್‌ಗಳಿಗಷ್ಟೇ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಅಸೋಸಿಯೇಷನ್ ಗೆ ಕಳೆದ ಹದಿಮೂರು ವರ್ಷಗಳ ಹಿಂದೆ ಚುನಾವಣೆ ನಡೆದಿತ್ತು, ದೇಶದ ಸಂವಿಧಾನವನ್ನೇ ಕಾಲ ಕಾಲಕ್ಕೆ ಜನರ ಅನುಕೂಲಕ್ಕಾಗಿ ತಿದ್ದುಪಡಿ ಮಾಲಾಗುತ್ತಿದೆ. ಆದರೆ ಬೈಲಾ ದಲ್ಲಿರುವ ಸಣ್ಣ ಲೋಪವನ್ನು ತೋರಿಸಿ ಅಡಾಕ್ ಕಮಿಟಿಗಳನ್ನೇ ಮಾಡುತ್ತಾ ಬರುತ್ತಿದ್ದಾರೆ. ತಾಲ್ಲೂಕಿನ ಸಮಗ್ರ ಮುಸ್ಲಿಮರನ್ನು ಪ್ರತಿನಿಧಿಸಬೇಕಾದ ವಕ್ಫ್‌ಬೋರ್ಡ್ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣೆ ಹಾಕುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಕಾಲ ಕಾಲಕ್ಕೆ ಚುನಾವಣೆಗಳು ನಡೆದು ಆಡಳಿತ ಮಂಡಳಿ ರಚನೆಯಾದರೆ ವರ್ಷಕೊಮ್ಮೆ ಸಾಮೂಹಿಕ ವಿವಾಹ, ಅಶಕ್ತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ವಯೋವೃದ್ದರಿಗೆ ಪೆನ್ಶನ್ ಕೊಡಬಹುದು. ಕಳೆದ ಹನ್ನೆರಡು ವರ್ಷಗಳಿಂದ ಇಂಹ ಯಾವುದೇ ಸಮಾಜಮುಖಿ ಕಾರ್ಯಗಳು ನಡೆದಿಲ್ಲ. ಬೆರಳೆಣಿಕೆಯಷ್ಟು ಮಂದಿ ಸೇರಿ ಸಭೆ ನಡೆಸಿ ಟೀ ಕುಡಿಯಲು ₹35000 ವೆಚ್ಚ ತೋರಿಸಿತ್ತಿದ್ದಾರೆ ಎಂದು ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪರೋಕ್ಷವಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀನಗರ ಬಶೀರ್ ಮಾಜಿ ಸದಸ್ಯರು ಮುಸ್ಲಿಂ ಯೂಥ್ ಅಸೋಸಿಯೇಷನ್. ರಫೀಕ್ ಪಾಷಾ ಮಾಜಿ ಸದಸ್ಯರು ಇಬ್ರಾಹಿಂ( ಬಾಪ್ ). ಇಫ್ತೆ ಕಾರ್ ಅಹಮದ್. ನಯಾಜ್ ಖಾನ್. ಮೊಹಮ್ಮದ್ ರಜಾ. ಮೊಹಮ್ಮದ್ ಏನಾಯತ್. ಫಯಾಜ್. ಆದಿಲ್. ಶಬ್ಬೀರ್. ಇಮ್ರಾನ್. ರಫೀಕ್.. ಫಯಾಜ್. ನೂರ್ ಭಾಯ್. ಇಲಿಯಾಸ್ ಅಹಮದ್, ನವೀದ್, ಸೇರಿದಂತೆ ಹತ್ತಾರು ಮುಸ್ಲಿಂ ಮುಖಂಡರುಗಳು ಉಪಸ್ಥಿತರಿದ್ದರು.