ಮುಸಲ್ಮಾನರಿಗೆ 4% ಮೀಸಲಾತಿಯನ್ನು ನೀಡುವುದು ಸಂವಿಧಾನ ಪ್ರಜಾಪ್ರಭುತ್ವದ ವಿರೋಧವಾಗಿದೆ-ಬಜರಂಗದಳ

ದೊಡ್ಡಬಳ್ಳಾಪುರ: ಕರ್ನಾಟಕ ಸರ್ಕಾರದ ಕಟ್ಟಡ ಕಾಮಗಾರಿ ಮತ್ತು ಸರಕು ಸಾಗಣಿಕೆ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ 4% ಮೀಸಲಾತಿಯನ್ನು ನೀಡುವುದು

ಸಂವಿಧಾನ ಪ್ರಜಾಪ್ರಭುತ್ವದ ವಿರೋಧವಾಗಿದೆ ಎಂದು ಬಜರಂಗದಳ ಕೋಲಾರ ವಿಭಾಗದ ಸಂಯೋಜಕ ನರೇಶ್ ರೆಡ್ಡಿ ಹೇಳಿದರು.

ನಗರದ ತಾಲೂಕು ಕಚೇರಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ನೀಡಿ ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ಪರಿಚಯಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

ಸಂವಿಧಾನದ ಆರ್ಟಿಕಲ್ 15 ನಿರ್ದಿಷ್ಟವಾಗಿ ರಾಜ್ಯವು ಧರ್ಮ ಮತ್ತು ಜಾತಿ ಆಧಾರದ ಮೇಲೆ ನಾಗರಿಕರ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ ಎಂದರು.

ಜಬರಂಗದಳ ಜಿಲ್ಲಾ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿ, ಧರ್ಮಧಾರಿತ ಮೀಸಲಾತಿಯನ್ನು ನೀಡುವಂತಿಲ್ಲ ಎಂದು ಕಾಲಕಾಲಕ್ಕೂ ಸುಪ್ರೀಂ ಕೋರ್ಟ್ ಆದೇಶ ನೀಡಿದರು ಕೂಡ, ಕರ್ನಾಟಕದಲ್ಲಿ ಆಡಳಿತಾರೂಢ ಸರ್ಕಾರದ ವೋಟ್ ಬ್ಯಾಂಕ್ ಆಗಿರುವ ಸಮುದಾಯವನ್ನು ಸಮಾಧಾನಪಡಿಸಲು, ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ಒದಗಿಸುವ ಕಾರ್ಯವು ರಾಷ್ಟ್ರೀಯ ಸಮಗ್ರತೆ, ಏಕತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ಮಸೂದೆಯನ್ನು ಅನುಮೋದಿಸದೇ ತಡೆ ಹಿಡಿಯಬೇಕೆಂದು ಒತ್ತಾಯಿಸಿದರು.

ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ರವಿ, ಸಹಕಾರ್ಯದರ್ಶಿ ಭಗತ್ ಭಾಸ್ಕರ್, ತಾಲೂಕು ಅಧ್ಯಕ್ಷ ಮಧುಸೂದನ್, ತಾಲೂಕು ಬಜರಂಗದಳ ಸಂಯೋಜಕ್ ವಿರಾಜ್, ಮುಖಂಡರಾದ ಮಹಾಂತೇಶ್, ಮನು, ಸೋಮು ಇದ್ದರು.

Leave a Reply

Your email address will not be published. Required fields are marked *