ಮುಳಬಾಗಿಲು ನಗರಸಭೆ ನೀರಿನ ಸಮಸ್ಯೆ ಪರಿಹರಿಸಲು ಕಾಂಗ್ರೆಸ್ ಮುಖಂಡರಿಂದ ಡಿಸಿಗೆ ಮನವಿ

ಕೋಲಾರ: ಜಿಲ್ಲೆಯ ಮುಳಬಾಗಿಲು ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳಿಗೂ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ಆದಿನಾರಾಯಣ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆದಿನಾರಾಯಣ ಮಾತನಾಡಿ, ಮುಳಬಾಗಿಲು ನಗರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆಗೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4 ರ ಅಡಿಯಲ್ಲಿ ಎರಡು ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಕೂಡಲೇ ಕುಡಿಯುವ ನೀರಿನ ಕಾಮಗಾರಿಗಳಿಗೆ ಟೆಂಡರ್ ಕರೆದು ಕ್ರಿಯಾಯೋಜನೆಗೆ ಅನುಮೋದನೆ ನೀಡಿ ನೀರಿನ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಮುಳಬಾಗಿಲು ನಗರದ ಆರ್.ಎಂ.ಸಿ. ಯಾರ್ಡ್ ಎದುರು ಇರುವ ಓವರ್‌ಹೆಡ್ ಟ್ಯಾಂಕ್, ಸಂಪು ಮತ್ತು ಪಂಪ್‌ಹೌಸ್ ದುರಸ್ಥಿ, ಮೋಟರ್ ಪಂಪ್ ಮತ್ತು ವಿದ್ಯುತೀಕರಣ ಕಾಮಗಾರಿ ಮತ್ತು ಬುಸಾಲಕುಂಟೆ ಪಂಪ್‌ ಹೌಸ್‌ಗೆ ಕಾಂಪೌಂಡ್, ಪೇವರ್‌ಬ್ಲಾಕ್ ಮತ್ತು ದುರಸ್ಥಿ ಕಾಮಗಾರಿ, ಬೊಮ್ಮನಕುಂಟೆ ಕೆರೆ ಮತ್ತು ಚೆಲುವನಾಯಕಹಳ್ಳಿ ಕೆರೆಯ ನೀರನ್ನು ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿ, ಕೊಳವೆಬಾವಿ ಕೊರೆಯುವುದು, ಮೋಟರ್ ಪಂಪ್, ಇತರೆ ಪೂರಕ ಸಾಮಗ್ರಿಗಳು ಹಾಗೂ ವಿದ್ಯುತೀಕರಣ ಕಾಮಗಾರಿಗಾಗಿ ನಗರೋತ್ಥಾನ ಯೋಜನೆಯಲ್ಲಿ ಹಣ ಬಿಡುಗಡೆಯಾಗಿದ್ದು ಕೂಡಲೇ ಕೆಲಸ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಮುಳಬಾಗಿಲು ನಗರಸಭೆ ವ್ಯಾಪ್ತಿಯಲ್ಲಿನ 31 ವಾರ್ಡ್ ಗಳಿಗೂ ಸರಕಾರದ14 ಮತ್ತು 15ನೇ ಹಣಕಾಸು ಯೋಜನೆಯಡಿಯಲ್ಲಿ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳಿಗೆ ಪಂಪ್-ಮೋಟರ್ ಮತ್ತು ಇತರೆ ಪೂರಕ ಸಾಮಗ್ರಿಗಳನ್ನು ಅಳವಡಿಸುವ ಕಾಮಗಾರಿ. ವಾರ್ಡ್ ನಂ.23ರಲ್ಲಿ ನೀರು ಶುದ್ದೀಕರಣ ಘಟಕ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳ ದುರಸ್ತಿಯಿಂದ ಸ್ಥಳೀಯರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಕೊನೆಯಾಗುತ್ತದೆ ಬಹುತೇಕವಾಗಿ ಬಡವರು ಕೂಲಿಕಾರ್ಮಿಕರು ಹೆಚ್ಚಾಗಿರುವ ಇಲ್ಲಿನ ಜನ ದೂರದ ಸ್ಥಳದಿಂದ ನೀರು ತರಬೇಕಾಗಿದೆ ಕೂಡಲೇ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ ನೀರಿನ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೂಡಲೇ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮನವಿ ನೀಡುವ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಆರ್ ರಾಜೇಂದ್ರಗೌಡ, ಗುಜ್ಜನಹಳ್ಳಿ ಮಂಜುನಾಥ್, ಮಾಜಿ ನಗರಸಭೆ ಅಧ್ಯಕ್ಷ ರಿಯಾಜ್ ಅಹ್ಮದ್, ಗ್ರಾಪಂ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ, ನಗರಸಭೆ ಸದಸ್ಯರಾದ ನಾಗರಾಜ್, ಶಾಹಿನ್ ಪಾಷ, ಸ್ಟಾರ್ ಇಮ್ರಾನ್, ಅಪ್ಪಿ, ಮೊಹಮ್ಮದ್ ಜಬಿ ಉಲ್ಲಾ, ಅಯೂಬ್ ಖಾನ್, ಶಂಕರಪ್ಪ, ವಿವೇಕಾನಂದ ಗೌಡ, ಶಿವಕುಮಾರ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!