
ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಿಹಳ್ಳಿ ಅಂಗನವಾಡಿ ಆವರಣದಲ್ಲಿದ್ದ ಬೃಹತ್ ಗಾತ್ರದ ಮರದ ಕೊಂಬೆ ಇಂದು ಬೆಳಗ್ಗೆ ಮುರಿದು ಬಿದ್ದಿದೆ.

ಈ ಕುರಿತು ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಗಾಯತ್ರಿ ಮಂಜುನಾಥ್ ಪ್ರತಿಕ್ರಿಯಿಸಿ, ಇನ್ನು ಅರ್ಧ ಗಂಟೆಯಲ್ಲಿ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರುವರಿದ್ದರು. ಅದಕ್ಕಿಂತ ಮುಂಚೆಯೇ ಬೃಹತ್ ಗಾತ್ರದ ಮರದ ಕೊಂಬೆ ಮುರಿದು ಬಿದ್ದಿದೆ. ಒಂದು ವೇಳೆ ಮಕ್ಕಳು ಶಾಲೆಗೆ ಬಂದ ಮೇಲೆ ಮುರಿದು ಬಿದ್ದಿದ್ದರೆ ಸಾಕಷ್ಟು ಅನಾಹುತ ಸಂಭವಿಸುತ್ತಿತ್ತು. ಮರದ ಕೊಂಬೆ ಮುರಿದು ಬೀಳುವ ಮುನ್ಸೂಚನೆ ಇತ್ತು. ಈ ಹಿನ್ನೆಲೆ ಕೊಂಬೆ ಮುರಿದು ಬೀಳುವ ಮುನ್ನ ತೆರವುಗೊಳಿಸುವಂತೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿತ್ತು ಎಂದು ಆಕ್ರೋಶ ವ್ಯಕ್ತಡಿಸುತ್ತಾ…. ಇನ್ನಾದರೂ ಮಕ್ಕಳ ಹಿತದೃಷ್ಟಿಯಿಂದ ಅಡ್ಡಾದಿಡ್ಡಿ ಬೆಳೆದಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿಬೇಕು ಎಂದು ಮನವಿ ಮಾಡಿದರು…

ಅಂಗನವಾಡಿಯ ಕಿಟಕಿ ಗಾಜುಗಳು ಹೊಡೆದಿವೆ. ವಿಷಕಾರಿ ಹಾವುಗಳು ಅಂಗನವಾಡಿಗೆ ಹಲವು ಬಾರಿ ಬಂದಿವೆ. ಅಂಗನವಾಡಿಗೆ ಬಣ್ಣ ಬಳಿದಿಲ್ಲ. ಮಕ್ಕಳಿಗೆ ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಇರುವುದಿಲ್ಲ . ಅಂಗನವಾಡಿ ಸಂಪಿಗೆ ಡೋರ್ ಸಹ ಇರುವುದಿಲ್ಲ. ಅಂಗನವಾಡಿಯ ಸುತ್ತ ಕಸವನ್ನು ಈಗಲೂ ಸುರಿಯುತ್ತಿದ್ದಾರೆ. ಇಲ್ಲಿಯವರೆಗೂ ಅಧ್ಯಕ್ಷರಾಗಲಿ, ಪಿಡಿಓ ಆಗಲಿ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು…