ಚರ್ಮಗಂಟು ರೋಗ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಹಾಡೋನಹಳ್ಳಿ ಹಾಗೂ ತೂಬಗೆರೆ ಪಶು ಆಸ್ಪತ್ರೆಯ ವ್ಯಾಪ್ತಿಯಲ್ಲಿ ಒಟ್ಟು 5,500 ಹಸುಗಳಿಗೆ ಚರ್ಮಗಂಟು ರೋಗ ತಡೆಗಟ್ಟುವ ಲಸಿಕೆಯನ್ನು ಇಂದು ನೀಡಲಾಯಿತು.
ಸದ್ಯ ತಾಲೂಕಿನಲ್ಲಿ ಚರ್ಮಗಂಟು ರೋಗ ತೀವ್ರತೆ ಕಡಿಮೆಯಾಗಿದ್ದು, ಆದರೂ ರಾಸುಗಳ ಆರೋಗ್ಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಚರ್ಮಗಂಟು ರೋಗ ತಡೆಗಟ್ಟುವ ಲಸಿಕೆ ನೀಡುತ್ತಿರುವ ಪಶುವೈದ್ಯ ಇಲಾಖೆ.
2017-18ರಲ್ಲಿ ಆಫ್ರಿಕನ್ ಖಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ LSD ವೈರಸ್ ನಂತರ ದಿನಗಳಲ್ಲಿ ಚೀನಾ ಮತ್ತು ಮಂಗೋಲಿಯಾದಲ್ಲೂ ಕಂಡು ಬಂದಿತ್ತು. ಬಳಿಕ 2019 ರಲ್ಲಿ ಒಡಿಶಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರತಕ್ಕೆ ಕಾಲಿಟ್ಟ ಚರ್ಮಗಂಟು ರೋಗ.
ಚರ್ಮ ಗಂಟು ರೋಗದ ಗುಣ ಲಕ್ಷಣಗಳು
ಜಾನುವಾರುಗಳಿಗೆ ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು, ನಿಶ್ಯಕ್ತಿ ಉಂಟಾಗುವುದು, ಕಾಲುಗಳಲ್ಲಿ ಬಾವು ಬಂದು ಕುಂಟುವುದು, ಚರ್ಮದ ಮೇಲೆ ಗುಳ್ಳೆ ಕಾಣಿಸಿಕೊಳ್ಳುವುದು, ಬಳಿಕ ಒಡೆದು ಗಾಯವಾಗುತ್ತದೆ.
ಸೊಳ್ಳೆ, ಉಣ್ಣೆ, ನೊಣ, ಕುದುರೆ ನೊಣ ಹಾಗೂ ವಿವಿಧ ಕೀಟಗಳ ಮೂಲಕ ಈ ಕಾಯಿಲೆ ಹರಡುತ್ತದೆ. ಜಾನುವಾರುಗಳ ನೇರ ಸಂಪರ್ಕದಿಂದಲೂ ಹರಡುವ ಸಾಧ್ಯತೆ ಇರುತ್ತದೆ. ಕಾಯಿಲೆ ಕಂಡುಬಂದ ಬಂದ ಎತ್ತು, ಹಸು, ಎಮ್ಮೆಗಳಲ್ಲಿ ಶೇ 1ರಿಂದ ಶೇ 5ರಷ್ಟು ಜಾನುವಾರುಗಳು ಸಾವಿಗೀಡಾಗುವ ಸಾಧ್ಯತೆ ಇರುತ್ತದೆ.