ಮುತ್ತೂರು ವಾರ್ಡ್ ಸದಸ್ಯ ಎಂ ಮುನಿರಾಜು ಗಡಿಪಾರು ಪ್ರಕರಣ; ಗಡಿಪಾರು ಆದೇಶ ಹಿಂಪಡೆಯದಿದ್ದರೇ ಮತದಾನ ಬಹಿಷ್ಕಾರದ ಎಚ್ಚರಿಕೆ; ಗಡಿಪಾರು ರದ್ದಿಗಾಗಿ ಗ್ರಾಮಸ್ಥರ ಆಗ್ರಹ

 

ನಗರದ 6 ನೇ ವಾರ್ಡ್ ನ ನಗರಸಭೆ ಸದಸ್ಯ ಎಂ. ಮುನಿರಾಜ್ (ಚಿಕ್ಕಪ್ಪಿ) ಗಡಿಪಾರು ವಿರೋಧಿಸಿ ವಾರ್ಡ್ ನ ಜನತೆ ಪ್ರತಿಭಟನೆ ನಡೆಸಿದರು.

ಕಳೆದ ತಿಂಗಳಿನಿಂದ ವಾರ್ಡ್ ನ ಸದಸ್ಯರು ಮುತ್ತೂರು ಗ್ರಾಮದತ್ತ ಸುಳಿದಿಲ್ಲ, ಗಡಿಪಾರಿನ ವಿಚಾರ ಪತ್ರಿಕೆಗಳಲ್ಲಿ ಬಂದ ಮೇಲೆ ತಿಳಿದಿದ್ದೂ ಜೂಜಾಡುವುದು ಗಡಿಪಾರು ಮಾಡುವಷ್ಟು ದೊಡ್ಡ ಅಪರಾಧವೇ? ನ್ಯಾಯಾಲಯವೇ ಜೂಜನ್ನು ಮನರಂಜನೆಯ ಆಟವೆಂದು ಹೇಳಿರುವಾಗ ಪೊಲೀಸರು ಏಕಾಏಕಿ ಚಿಕ್ಕಪ್ಪಿಯನ್ನು ಗಡಿಪಾರು ಮಾಡಿರುವುದು ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರಾದ ಮೇಲೆ ಕಳೆದ ಎರಡು ವರ್ಷಗಳಿಂದ ವಾರ್ಡ್ ನ ಅಭಿವೃದ್ದಿಗೆ ಶ್ರಮಿಸಿದ್ದಾರೆ, ಅಸಹಾಯಕರಿಗೆ ನೆರವಾಗಿದ್ದಾರೆ, ಕ್ರೀಡಾಕೂಟಗಳನ್ನು ಆಯೋಜಿಸಿ ಯುವಕರಿಗೆ ಉತ್ತೇಜನ ನೀಡಿದ್ದಾರೆ ಇಂಥವರನ್ನು ಕ್ಷುಲ್ಲಕ ಕಾರಣಕ್ಕೆ ಖಂಡನೀಯ, ಚುನಾವಣೆ ಮುಗಿಯುವುದರ ಒಳಗೆ ಅವರನ್ನು ವಾಪಾಸ್ ಕರೆಸಬೇಕು ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದರು.

ಗುರುವಾರ ಸುರಿದ ಬಾರಿ ಮಳೆಗೆ ಬೀದಿ ದೀಪಗಳು ಕೆಟ್ಟಿವೆ, ಒಳಚರಂಡಿಗಳು ಉಕ್ಕಿ ಹರಿದಿದೆ, ಸಮಸ್ಯೆಕುರಿತು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೇ ನಿಮ್ಮ ವಾರ್ಡ್ ನ ಸದಸ್ಯರಿಗೆ ಹೇಳಿ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ದೂರಿದರು.

ಈ ವೇಳೆ ಸ್ಥಳೀಯರಾದ ವಾಜಿದ್ ಪಾಷಾ ಮಾತನಾಡಿ, ಚಿಕ್ಕಪ್ಪಿಯವರು ಪ್ರಾಣಿಪಕ್ಷಿಗಳಿಗೆ ಆಹಾರ-ನೀರು ವದಗಿಸುತ್ತಿದ್ದರು, ಈಗ ಅರನ್ನು ಗಡಿಪಾರು ಮಾಡಿರುವುದರಿಂದ ಪ್ರಾಣಿ ಪಕ್ಷಿಗಳು ಅನಾಥವಾಗಿದೆ, ಪ್ರಾಣಿ ಪಕ್ಷಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸುಮಾರು 20 ಕುಟುಂಬಗಳು ಬೀದಿಗೆ ಬಿದ್ದಿವೆ, ಕೊಲೆ ಸುಲಿಗೆ ಭ್ರಷ್ಟಾಚಾರ ಮಾಡಿದವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ, ಚಿಕ್ಕಪ್ಪಿಯವರು ಜೂಜಾಟದಲ್ಲಿ ಇದ್ದರು ಎಂಬ ಕಾರಣಕ್ಕೆ ಅವರ ವಿರುದ್ದ ಪ್ರಕರಣ ದಾಖಲಿಸಿ ಎಷ್ಟು ಸರಿ ಎಂದು ಪ್ರಸದ್ನಿಸಿದರು.

ಮತ್ತೊಬ್ಬ ಸ್ಥಳೀಯ ಮೂರ್ತಿ ಎಂಬುವವರು ಮಾತನಾಡಿ, ಜೂಜಾಡಿದಕ್ಕೆ ಗಡಿಪಾರು ಮಾಡಿರುವುದನ್ನು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇವೆ, ಗ್ರಾಮಸ್ಥರೆಲ್ಲ ಸೇರಿ ಇದರ ವಿರುದ್ದ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ವಾರ್ಡ್ ಗೆ ಸವಲತ್ತು ಕೇಳಿದ್ದೇ ಮುಳುವಾಯ್ತಾ , ದುರುದ್ದೇಶದಿಂದ ಗಡಿಪಾರು ಮಾಡಲಾಗಿದೆ, ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಲು ತಯಾರಿ ನಡೆಸಿದ್ದರು ರಾಜಕೀಯ ಷಡ್ಯಂತ್ರಗಳು ನಡೆಸಿ ಅವರನ್ನು ಚುನಾವಣೆಗೆ ನಿಲ್ಲದಂತೆ ನೋಡಿಕೊಂಡಿದ್ದಾರೆ ಎಂದು ಸ್ಥಳೀಯರಾದ ಪುರುಷೋತ್ತಮ್ ಆರೋಪಿಸಿದರು.

ಇದೇ ಸಂದರ್ಭದಲ್ಲಿ ಗಡಿಪಾರು ಶಿಕ್ಷೆ ರದ್ದು ಮಾಡುವಂತೆ ಸ್ಥಳೀಯರು ಘೋಷಣೆ ಕೂಗಿದರು, ಈ ವೇಳೆ ಶ್ರೀನಿವಾಸ್, ಅಕ್ಮಲ್, ಆನಂದ್ ಕುಮಾರ್ ಇತರರು ಇದ್ದರು.

Leave a Reply

Your email address will not be published. Required fields are marked *