ಮುಂದುವರಿದ ಚಿರತೆ ಹಾವಳಿ: ನಿನ್ನೆ ಮಧ್ಯಾಹ್ನ ಚಿರತೆ ದಾಳಿಗೆ ಮೇಕೆ ಬಲಿ: ಇಂದು ಮೃತ ಮೇಕೆ ಪತ್ತೆ

ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸಮೀಪವಿರುವ ಪಾಲ್ ಪಾಲ್ ದಿನ್ನೆ ಗ್ರಾಮದ ಹೊರವಲಯದಲ್ಲಿರುವ ಕಾಡಿನಂಚಿನಲ್ಲಿ ನಿನ್ನೆ ಮಧ್ಯಾಹ್ನ ಮೇಕೆಯೊಂದರ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿದೆ. ಇಂದು ಮೃತ ಮೇಕೆ ಪತ್ತೆಯಾಗಿದೆ.

ರೈತ ಲಕ್ಷ್ಮಣ್ ಎಂದಿನಂತೆ ಬುಧವಾರವು(ಆ.9) ತನ್ನ ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರವಲಯದಲ್ಲಿರುವ ಕಾಡಿಗೆ ಹೋಗಿದ್ದಾರೆ. ಯಾರು ಇಲ್ಲದ ಸಮಯದಲ್ಲಿ ಹೊಂಚು ಹಾಕಿ ಮೇಕೆ ಮೇಲೆ ಎರಗಿ ಬಲಿ ಪಡೆದಿರುವ ಚಿರತೆ. ನಿನ್ನೆ ಸಂಜೆ ಮನೆಗೆ ಬಂದು ನೋಡಿದಾಗ ಒಂದು‌ ಮೇಕೆ ನಾಪತ್ತೆಯಾಗಿರುವುದು ರೈತ ಲಕ್ಷ್ಮಣ್ ಗಮನಕ್ಕೆ ಬಂದಿದೆ. ಇಂದು ಕಾಡೆಲ್ಲಾ ಹುಡುಕಾಡಿದ ಸಂದರ್ಭದಲ್ಲಿ ಕಾಡಿನ ಪಕ್ಕದಲ್ಲೇ ಇರುವ ಕೆರೆ ಬಳಿ ಮೃತ ಮೇಕೆ ಪತ್ತೆಯಾಗಿದೆ.

ಈ ಕುರಿತು ಕೂಡಲೇ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಹಾವಳಿಗೆ ಬೆಚ್ಚಿಬಿದ್ದಿರುವ ಗ್ರಾಮಸ್ಥರು, ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಿದ್ದಾರೆ.

Ramesh Babu

Journalist

Recent Posts

ವಿ. ಶಾಂತಕುಮಾರ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…

1 hour ago

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಿಹಳ್ಳಿ ಸಮೀಪದ ಹೋಟೆಲ್ ನಲ್ಲಿ…

2 hours ago

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್: ಏ.1ರಿಂದ ನೋಂದಣಿ: ಮೇ.9, 10ಕ್ಕೆ ಕ್ರಿಕೆಟ್ ಟೂರ್ನಮೆಂಟ್

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ನ್ನು ಮೇ.9 ಮತ್ತು 10ರಂದು ಆಯೋಜನೆ ಮಾಡಲಾಗಿದೆ...…

3 hours ago

ಕರ್ನಾಟಕದ ಶೈಕ್ಷಣಿಕ ಭಾಷಾ ನೀತಿ…..

ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ..... ಕನ್ನಡ ತಾಯಿ…

6 hours ago

ಮಹಾವೀರ ಜಯಂತಿ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂದು ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅದೇರೀತಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ…

17 hours ago

ನಾನು ಯಾರ ಜಮೀನು ಕಬಳಿಕೆ‌ ಮಾಡಿಲ್ಲ- ಕಾನೂನಾತ್ಮಕವಾಗಿ ಜಮೀನು ಖರೀದಿ ಮಾಡಿದ್ದೇನೆ- ನನ್ನ ಏಳಿಗೆ ಸಹಿಸದವರಿಂದ ನನ್ನ ಮೇಲೆ ಹಲ್ಲೆ ನಡೆದಿದೆ- ಕಾನೂನು ಹೋರಾಟ ಮಾಡಿ ಗೆಲ್ಲುವೆ- ವಕೀಲ ಪ್ರತಾಪ್

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…

18 hours ago