ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ.
ಮುನಿರಾಜು ಎಂಬುವವರಿಗೆ ಸೇರಿದ ಮನೆಯೊಂದರಲ್ಲಿ ಕಟ್ಟಿಹಾಕಲಾಗಿದ್ದ ಮೇಕೆಯನ್ನು ಊರ ಹೊರವಲಯಕ್ಕೆ ಹೊತ್ತೊಯ್ದ ಕತ್ತು ಸೀಳಿ ಅರೆಬರೆ ತಿಂದು ಪರಾರಿಯಾಗುರುವ ಘಟನೆ ತಡರಾತ್ರಿ ಸುಮಾರು 2ಗಂಟೆ ಸಮಯದಲ್ಲಿ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆ ಕುಕ್ಕಲಹಳ್ಳಿ ಗ್ರಾಮದಲ್ಲೂ ಸಹ ಇದೇ ರೀತಿ ಮನೆ ಕಾಂಪೌಡ್ ಒಳಗೆ ಇದ್ದ ಮೆಕೆಯನ್ನ ಹೊತ್ತೊಯ್ದು ಬಲಿ ಪಡೆದಿತ್ತು, ಇದೀಗ ಈ ಘಟನೆ ಮಾಸುವ ಮೊದಲೇ ಇನ್ನೊಂದು ಮೇಕೆ ಮೇಲೆ ದಾಳಿ ಮಾಡಲಾಗಿದೆ.
ಚಿರತೆ ಹಾವಳಿಯಿಂದ ತಾಲೂಕಿನ ಜನತೆ ಭಯಭೀತರಾಗಿದ್ದು, ಮೇಕೆ ಕಳೆದುಕೊಂಡ ರೈತ ಸದ್ಯ ಸಂಕಷ್ಟದಲ್ಲಿದ್ದಾರೆ. ಕೂಡಲೇ ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯಲ್ಲಿ ಸಾರ್ವಜನಿಕರು ಕೋರಿದ್ದಾರೆ.