
ದೊಡ್ಡಬಳ್ಳಾಪುರ : ದೇವಾಲಯಗಳ ಸ್ವಚ್ಚತೆಯನ್ನು ಕಾಪಾಡುವ ಸಲುವಾಗಿ ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಚತಾ ಸಮಿತಿಯಿಂದ ಇಂದು ತೂಬಗೆರೆ ಹೋಬಳಿಯ ಕೊಂಡಸಂದ್ರದ ಕಾಶಿವಿಶ್ವನಾಥ ದೇವಾಲಯದ ಕಲ್ಯಾಣಿ ಸ್ವಚ್ಚತೆ ಹಾಗೂ ದೇವಾಲಯದ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ದೊಡ್ಡಬಳ್ಳಾಪುರ ಭಾಗದ ಪತ್ರಕರ್ತರು, ಕಾಶಿವಿಶ್ವನಾಥ ದೇವಾಲಯದ ಅಭಿವೃದ್ಧಿ ಸಮಿತಿ, ಹಾಗೂ ದೊಡ್ಡಬಳ್ಳಾಪುರ ಭಾಗದ ಹಲವಾರು ಹಿಂದೂ ಕಾರ್ಯಕರ್ತರೊಡನೆ ಸೇರಿ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ದೊಡ್ಡಬಳ್ಳಾಪುರ ಸ್ವಚ್ಚತಾ ಸಮಿತಿಯ ಸ್ವಚ್ಚತಾ ಕಾರ್ಯವೈಖರಿ ಮುಂದುವರೆದಿದ್ದು, ಮುಂದಿನ ಭಾನುವಾರ ಆಯುಧ ಪೂಜಾ ವಿಶೇಷ ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗನಹಳ್ಳಿಯ ಪ್ರಸಿದ್ದ ಚೋಳರ ಕಾಲದ ಶ್ರೀ ಆಂಜನೇಯ ದೇಗುಲದಲ್ಲಿ ನಡೆಯಲಿದೆ.
ಕಾಶಿ ವಿಶ್ವನಾಥ ದೇವಾಲಯದ ಸ್ವಚ್ಚತಾ ಕಾರ್ಯ ಪಕ್ಷತೀತವಾಗಿ ಎಲ್ಲರೂ ಒಟ್ಟಾಗಿ ಕೈಜೋಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.
ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಜೆಸಿಬಿ ವ್ಯವಸ್ಥೆಯನ್ನು ತೂಬಗೆರೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಲಗುಮಯ್ಯ ನೀಡಿದ್ದು, ಬೆಳಗಿನ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ತೂಬಗೆರೆ ಬಿಜೆಪಿ ಮುಖಂಡರು ಹಾಗೂ ವಕೀಲರಾದ ಪ್ರತಾಪ್ ಹಾಗೂ ಟಿ.ಎನ್. ಕೃಷ್ಣಪ್ಪ ಕಲ್ಪಿಸಿದ್ದರು. ಸ್ವಚ್ಛತಾ ಕಾರ್ಯಕ್ಕೆ ಅನುಕೂಲ ಕಲ್ಪಿಸಲು ಟ್ರಾಕ್ಟರ್ ವ್ಯವಸ್ಥೆಯನ್ನು ತೂಬಗೆರೆ ಬಿಜೆಪಿ ಮುಖಂಡ ರಾಮಕೃಷ್ಣಪ್ಪ ನೀಡಿದ್ದು, ಬ್ಯಾನರ್ ವ್ಯವಸ್ಥೆಯನ್ನು ದೊಡ್ಡಬಳ್ಳಾಪುರ ಮಧುಮಿತ ಆರ್ಟ್ಸ್ ನ ವಿಜಯಕುಮಾರ್ ಮಾಡಿಕೊಟ್ಟಿದ್ದಾರೆ ಎಲ್ಲಾ ದಾನಿಗಳಿಗೂ ನಮ್ಮ ಸ್ವಚ್ಛತಾ ಸಮಿತಿ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಸ್ವಚ್ಚತಾ ಕಾರ್ಯದ ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖಂಡರಾದ ಸಿ.ಎಂ.ಕೃಷ್ಣಪ್ಪ, ಮುನಿಕೃಷ್ಣಚಾರ್, ಕೇಬಲ್ ಮಂಜು, ಗೋಪಾಲ್, ಶ್ರೀನಿವಾಸ ಗುರೂಜಿ, ಘನ ಶ್ಯಾಮ್, ಕೆಂಪರಾಜು, ಮಲ್ಲೇಶ್, ಶ್ರೀನಿವಾಸ್, ಮಧು, ನರಸಿಂಹಮೂರ್ತಿ ಉದಯ ಆರಾಧ್ಯ, ಹಳ್ಳಿ ರೈತ ಅಂಬರೀಶ್, ಶಿವಕುಮಾರ್ ಸ್ವಾಮಿ, ಕಿರಣ್ ನಾರಸಿಂಹನಹಳ್ಳಿ, ಗಂಗರಾಜು, ರಾಜೇಶ್ ಸೇರಿದಂತೆ ತೂಬಗೆರೆ ಭಾಗದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಹಲವಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.