ಈ ವರ್ಷ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಕೆಆರ್ ಎಸ್ ಜಲಾಶಯ ಬರೆದಾಗುತ್ತಿದೆ. ಜಲಾಶಯದ ನೀರಿನ ಮಟ್ಟ 77 ಅಡಿಗೆ ಕುಸಿದಿದೆ ಎನ್ನಲಾಗುತ್ತಿದೆ.
ಈ ವಾರದಲ್ಲಿ ಮಳೆಯಾಗದಿದ್ದರೆ ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತವಗುವ ಸಾಧ್ಯತೆ ಇದೆ. ಡ್ಯಾಂನಲ್ಲಿ ಇರುವ ನೀರಿನಲ್ಲಿ 3 TMC ನೀರಷ್ಟೆ ಬಳಕೆಗೆ ಸಾಧ್ಯವಾಗಿದ್ದು, ಡೆಡ್ ಸ್ಟೋರೇಜ್ ಮಟ್ಟ ನೀರು ತಲುಪಿದರೆ ನೀರು ಪೂರೈಕೆ ಸ್ಥಗಿತವಾಗುವ ಆತಂಕ ಎದುರಾಗಿದೆ.
ಕುಡಿಯುವ ನೀರಿಗೆ ಆಹಾಕಾರವಲ್ಲದೇ ರೈತರ ಬೆಳೆಗಳಿಗೂ ನೀರು ಆಹಾಕಾರ ಆಗುವ ಸಾಧ್ಯತೆ ಇದೆ ಎಂದು ಸರ್ಕಾರಕ್ಕೆ ನೀರಾವರಿ ಇಲಾಖಾಧಿಕಾರಿಗಳು ವರದಿ ನೀಡಿದ್ದಾರೆ.