ಮಾ.22ರಂದು ಕರ್ನಾಟಕ ಬಂದ್ ಬೆಂಬಲಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಗರದಲ್ಲಿ ಪ್ರತಿಭಟನೆಗೆ ನಿರ್ಧಾರ

ದೊಡ್ಡಬಳ್ಳಾಪುರ : ಮಾರ್ಚ್ 22 ರಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಬೆಂಬಲಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕನ್ನಡಪರ ಸಂಘಟನೆಗಳ ಒಕ್ಕೂಟ ನಿರ್ಧರಿಸಿತು.

ನಗರದ ಕನ್ನಡ ಜಾಗೃತ ಭವನದಲ್ಲಿ ಸಭೆ ಸೇರಿದ್ದ ವಿವಿಧ ಕನ್ನಡ ಮತ್ತು ರೈತಪರ ಸಂಘಟನೆಗಳ ಮುಖಂಡರು, ಮಾರ್ಚ್ 22 ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಬೃಹತ್ ಪ್ರತಿಭಟನೆಯ ಮೂಲಕ ಕರ್ನಾಟಕ ಬಂದ್ ಗೆ ಬೆಂಬಲಿಸಲು ನಿರ್ಧಾರ ಕೈಗೊಂಡರು.

ಈ ವೇಳೆ ಮಾತನಾಡಿದ ಮುಖಂಡರು, ಮಹಾರಾಷ್ಟ್ರದ ಎಂಇಎಸ್ ಪುಂಡರು, ನಮ್ಮ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ನಡೆಸಿದ್ದಲ್ಲದೆ ಮುಂದುವರೆದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೇಲೂ ದೌರ್ಜನ್ಯ ನಡೆಸಿದ್ದಾರೆ. ಈ ದೌರ್ಜನ್ಯ ಖಂಡಿಸಿ, ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾರಾ.ಗೋವಿಂದ್, ಮಂಜುನಾಥ ದೇವ, ಪ್ರವೀಣ್ ಕುಮಾರ್ ಶೆಟ್ಟಿ ಮುಂತಾದವರು ಇದೇ ಮಾರ್ಚ್ 22 ರ ಶನಿವಾರ ಕರೆ ಕೊಟ್ಟಿರುವ ಬಂದ್ ಗೆ ಬೆಂಬಲ ಸೂಚಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.

ಮರಾಠಿ ಎಂಇಎಸ್ ಪುಂಡರು ಪದೇ ಪದೇ ರಾಜ್ಯದ ಕನ್ನಡಿಗರ ಸ್ವಾಭಿಮಾನವನ್ನ ಕೆಣಕುತ್ತಿದ್ದಾರೆ. ಕರ್ನಾಟಕ ಬಂದ್ ಉದ್ದೇಶ ಸರಿಯಾಗಿದೆ, ಆದರೆ, ಸಮಯ ಸೂಕ್ತವಲ್ಲ, ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಈಗ ಬಂದ್ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಂದ್ ಕಾರ್ಯಕ್ರಮ ಯಶಸ್ವಿಯಾಗಬೇಕು.

ಮರಾಠಿ ಪುಂಡರದು ಸದಾ ಇದೇ ರೀತಿಯ ಕಿರುಕುಳ ನೀಡುತ್ತಿದ್ದಾರೆ. ಬೆಳಗಾವಿ ನಮ್ನ ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಭಾಷಾವಾರು ಪ್ರಾಂತಗಳ ವಿಂಗಡಣೆಯಾದಂದೆ ಬೆಳಗಾವಿ ಕನ್ನಡಿಗರು ಮತ್ತು ಕರ್ನಾಟಕಕ್ಕೆ ಸೇರಿದ್ದು ಎಂದು ನಿರ್ಧರಿಸಲಾಗಿದೆ. ಆದರೂ ಕೆಲವು ಎಂಇಎಸ್ ಪುಂಡರು ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿರುವುದು ಖಂಡನೀಯ ಎಂದರು.

ಉದ್ಯೋಗ ಅರಸಿ ಹೊರಗಿನಿಂದ ಬರುವ ಅನ್ಯ ಭಾಷಿಕರು, ಕನ್ನಡ ಭಾಷೆ ಕಲಿಯದೆ ಕನ್ನಡಿಗರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದಾರೆ. ಉತ್ತರ ಭಾರತದ ರಾಜ್ಯಗಳು ದಕ್ಷಿಣದ ಮೇಲೆ ಹಿಂದಿ ಹೇರಿಕೆ ಮಾಡುತ್ತಿವೆ. ಇನ್ನು ಕ್ವೀನ್ ಸಿಟಿ ಹೆಸರಲ್ಲಿ ನಮ್ಮ ಭೂಮಿ ಮಾರ್ವಾಡಿಗಳ ಪಾಲಾಗುತ್ತಿದೆ. ಆಳುವ ಸರ್ಕಾರಗಳು ರೈತರು, ಕಾರ್ಮಿಕರ ಹೆಸರಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಬೃಹತ್ ಸಬ್ಸಿಡಿ ನೀಡುತ್ತಿವೆ. ರೈತರ ಸಾಲ ಮನ್ನಾ ಮಾಡದ, ಬೆಳೆದ ಧಾನ್ಯಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ಘೋಷಣೆ ಮಾಡದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶದ 26 ಉದ್ಯಮಪತಿಗಳ 16 ಲಕ್ಷಕೋಟಿ ಸಾಲದ ಹಣವನ್ನು ರೈಟಪ್ ( ವಸೂಲಾಗದ ಸಾಲ ) ಮಾಡಿದೆ. ಇದು ಈ ದೇಶದ ದುಡಿಯುವ ಜನರಿಗೆ ಮಾಡಿದ ದ್ರೋಹವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ರಾಜ್ಯದ ಜ್ವಲಂತ ಸಮಸ್ಯೆಗಳು ಎದುರಾದಾಗ ತಾಲ್ಲೂಕಿನ ಹಲವಾರು ಕನ್ನಡಪರ, ದಲಿತ, ರೈತ ಮತ್ತು ಕಾರ್ಮಿಕ ಸಂಘಟನೆಗಳು ಧ್ವನಿಯೆತ್ತಿವೆ. ಪ್ರಮುಖವಾಗಿ ದೊಡ್ಡಬಳ್ಳಾಪುರದ ಜನತೆ ನೇಕಾರಿಕೆಯನ್ನೇ ತಮ್ಮ ಬದುಕಾಗಿಸಿಕೊಂಡಿದ್ದಾರೆ. ಯುಗಾದಿ ಹಬ್ಬ ಹತ್ತಿರದಲ್ಲಿದೆ‌, ವ್ಯಾಪಾರಿಗಳ ಒಂದು ದಿನದ ವಹಿವಾಟುಗಳು ನಿಂತರೆ ಅದು ಆರ್ಥಿಕವಾಗಿ ಬೇರೆ ರೀತಿಯ ಪರಿಣಾಮ ಬೀರುತ್ತದೆ.
ಜನಸಾಮಾನ್ಯರು, ಕಾರ್ಮಿಕರು ವರ್ತಕರ ಬೆಂಬಲ ಪಡೆಯಬೇಕು ಅವರಿಗೂ ಸ್ಫಂದಿಸಬೇಕು, ಹಾಗಾಗಿ ಕರ್ನಾಟಕ ಬಂದ್ ಬೆಂಬಲಿಸಿ ಬೃಹತ್ ಪ್ರತಿಭಟನೆ ನಡೆಸುವುದೆಂದು ನಿರ್ಧರಿಸಿದರು.

ಮನವಿ ಸಲ್ಲಿಕೆ :

ಮಾರ್ಚ್ 22 ರಂದು ತಿಂಗಳ ನಾಲ್ಕನೇ ಶನಿವಾರ ಆದ ಕಾರಣ, ಶುಕ್ರವಾರದಂದು ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವ ನಾಯಕ್, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ.ಅಂಜನೇಯ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಕರ್ನಾಟಕ ರಾಜ್ಯ ರೈತ ಸಂಘದ ಮುತ್ತೇಗೌಡ, ಪ್ರಸನ್ನ, ಡಾ.ರಾಜ್‌ಕುಮಾರ್ ಆಭಿಮಾನಿಗಳ ಸಂಘದ ಸು.ನರಸಿಂಹ ಮೂರ್ತಿ, ಪರಮೇಶ್, ಭುವನೇಶ್ವರಿ ಕನ್ನಡ ಸಂಘದ ನವೀನ್, ಮುಖಂಡರಾದ ತಿಮ್ಮರಾಜು, ಸುರೇಶ್, ರಮೇಶ್, ನಾಗರಾಜು, ವೆಂಕಟೇಶ್, ಮುನಿಪಾಪಯ್ಯ, ರಾಜಣ್ಣ, ಹೆಚ್. ಮಂಜುನಾಥ್, ಪತ್ರಕರ್ತ ಡಿ.ಶ್ರೀಕಾಂತ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ…

5 hours ago

ನಕಲಿ ಔಷಧಿಗಳ ಮಾರಾಟ ಜಾಲದ ಕಿಂಗ್‌ಪಿನ್ ಪ್ರಶಾಂತ್ ಪೊಲೀಸರ ವಶಕ್ಕೆ

ದೇವನಹಳ್ಳಿ: ನಕಲಿ ಔಷಧಿಗಳ ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಪ್ರಕರಣದ ಕಿಂಗ್‌ಪಿನ್ ಎಂದು ಪೊಲೀಸರು ಗುರುತಿಸಿರುವ ಪ್ರಶಾಂತ್…

1 day ago

ಒಂದು ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆಯಾದ ಬೆಳೆಗೂ ಕುತ್ತು | ರಾಗಿ, ಮೆಕ್ಕೆಜೋಳಕ್ಕೆ ತೇವಾಂಶದ ಕೊರತೆ | ಕೆರೆ-ಕುಂಟೆಗಳು ಖಾಲಿ, ಮೇವಿನ ಕೊರತೆಯ ಆತಂಕ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆಯ ಕೊರತೆಯಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಇದೀಗ ಮತ್ತೊಂದು ಆತಂಕ…

1 day ago

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ತಲೆ ಇಲ್ಲದ  ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನೆಲಮಂಗಲ–ಮಧುರೆ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಸಮೀಪ…

2 days ago

ಮಹಾಲಯ ಅಮಾವಾಸ್ಯೆ – ಪಿತೃ ಪಕ್ಷ – ಎಡೆ ಹಬ್ಬ….

ಮತ್ತೆ ಮತ್ತೆ ಕಾಲದ ಅಗ್ನಿಪರೀಕ್ಷೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಪುನರ್ ವಿಮರ್ಶೆಗೊಳಪಡಿಸಿ, ಅನುಭವದ ಆಧಾರದ ಮೇಲೆ ಸಾರ್ವತ್ರಿಕ ಸತ್ಯಗಳನ್ನು…

2 days ago

ಯೋಗ್ಯತೆ ಇದ್ದರೆ ಎಸ್‌ಡಿಆರ್‌ಎಫ್ ಹಣ ಕೊಡಿಸಿ- ಕುಮಾರಸ್ವಾಮಿ ಟೀಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…

3 days ago