ಮಾ.19 ರಿಂದ ಮಾ.22ರವರೆಗೆ ಮೇಲಿನ ಜೂಗಾನಹಳ್ಳಿಯಲ್ಲಿ ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆ

ಮೇಲಿನ ಜೂಗಾನಹಳ್ಳಿ ಕ್ರಿಕೆಟರ್ಸ್ ವತಿಯಿಂದ (ದಿವಂಗತ ಡಾ. ಪುನಿತ್ ರಾಜ್‌ಕುಮಾರ್‌ ಸವಿನೆನಪಿಗಾಗಿ) ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಿಮೆಂಟನ್ನು ಮಾ.19 ರಿಂದ ಮಾ.22ರವರೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಮೇಲಿನ ಜೂಗಾನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ..

ಮಾ.19 ರಿಂದ ಮಾ.22ರವರೆಗೆ ನಡೆಯುವ ಟೆನ್ನಿಸ್ ಬಾಲ್ (ವಿಕ್ಕಿ) ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಆಸಕ್ತಿಯುಳ್ಳ ತಂಡಗಳು ತಮ್ಮ ತಂಡದ ಹೆಸರನ್ನು ದಿನಾಂಕ 18-3-2026 ಬುಧವಾರ ರಂದು ಸಂಜೆ 6 ಗಂಟೆಯೊಳಗೆ ನೋಂದಾಯಿಸಿಕೊಳ್ಳತಕ್ಕದ್ದು.

ಪ್ರಥಮ ಬಹುಮಾನ : ರೂ. 25001/- ಮತ್ತು ಆಕರ್ಷಕ ಟ್ರೋಫಿ

ದ್ವಿತೀಯ ಬಹುಮಾನ : ರೂ. 15001/- ಮತ್ತು ಟ್ರೋಫಿ

ಪ್ರವೇಶ ಶುಲ್ಕ 1999/-)

16ವರ್ಷದೊಳಗಿನ ಮಕ್ಕಳಿಗೆ ದಿನಾಂಕ 19-3-2026 ಗುರುವಾರದಂದು ಮಾತ್ರ ಉಚಿತ ಪ್ರವೇಶ ಶುಲ್ಕವಿರುತ್ತದೆ.

ನಿಬಂಧನೆಗಳು :

* ಎಲ್ಲಾ ಪಂದ್ಯಗಳು ಐ.ಸಿ.ಸಿ. ನಿಯಮಗಳಿಗೆ ಒಳಪಟ್ಟಿರುತ್ತವೆ (ಲೆಗ್ ಬೈಸ್ & ಎಲ್.ಬಿ. ಡಬ್ಲ್ಯೂಯೊ ಹೊರತುಪಡಿಸಿ)

ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ ಇದಕ್ಕೆ ಪ್ರತಿಯಾಗಿ ಆನಧಿಕೃತವಾಗಿ ವಾಗ್ವಾದ ಮಾಡಿದ್ದಲ್ಲಿ ಅಂತಹ ತಂಡವನ್ನು ಟೂರ್ನಿಯಿಂದ ಕೈಬಿಡಲಾಗುವುದು.

ಪಂದ್ಯದ ಪ್ರತಿ ಇನ್ನಿಂಗ್ಸ್ 6 ಓವರ್‌ಗಳಿಗೆ ಸೀಮಿತವಾಗಿರುತ್ತದೆ.

ಒಂದು ತಂಡದಲ್ಲಿ ಆಡಿರುವ ಆಟಗಾರನಿಗೆ ಮತ್ತೊಂದು ತಂಡದಲ್ಲಿ ಆಡಲು ಅವಕಾಶವಿಲ್ಲ.

ಯಾವುದೇ ತಂಡ ನಿರ್ದಿಷ್ಟ ಸಮಯಕ್ಕೆ ಹಾಜರಿಲ್ಲವಾದಲ್ಲಿ ಅಂತಹ ತಂಡಕ್ಕೆ ವಾಕ್‌ವರ್ ನೀಡಲಾಗುವುದು.

ಪ್ರತಿ ದಿನ ಮಧ್ಯಾಹ್ನ ಬಿಸಿ ಬಿಸಿ ಊಟದ ವ್ಯವಸ್ಥೆ ಇರುತ್ತದೆ.

ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ಇರುತ್ತದೆ.

ಪ್ರತಿ ಆಟಗಾರರು ಆಧಾರ್ ಕಾರ್ಡ್‌ನ್ನು ಜೊತೆಯಲ್ಲಿ ಕಡ್ಡಾಯವಾಗಿ ತರತಕ್ಕದ್ದು. (ಒ.ಟಿ.ಪಿ. ಮುಖಾಂತರ ಪರೀಕ್ಷಿಸಲಾಗುವುದು)

ಒಂದು ತಂಡದಲ್ಲಿ ಒಂದೇ ಊರಿನ ಹಾಗೂ ಒಂದೇ ವಾರ್ಡ್‌ನ ಆಟಗಾರರು ಮಾತ್ರ ಆಡಬೇಕು.

ಹೆಚ್ಚಿನ ಮಾಹಿತಿಗಾಗಿ ಗೋಪಾಲಕೃಷ್ಣ :9686326887, ಸುರೇಶ್ : 9110487161, ಮುತ್ತರಾಜು : 9066333374, ರಾಜು : 7483949414, ಹರೀಶ್ : 9110689044ನ್ನು ಸಂಖ್ಯೆಯನ್ನು ಸಂಪರ್ಕಿಸಿ….

Leave a Reply

Your email address will not be published. Required fields are marked *

error: Content is protected !!