ಮಾ.14ರಿಂದ ಮೇಲಿನಜೂಗಾನಹಳ್ಳಿಯಲ್ಲಿ “ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಿಮೆಂಟ್”

ಮೇಲಿನ ಜೂಗಾನಹಳ್ಳಿ ಕ್ರಿಕೆಟರ್ಸ್ ವತಿಯಿಂದ ದಿವಂಗತ ಡಾ.ಪುನಿತ್ ರಾಜ್‌ಕುಮಾರ್‌ರವರ ಸವಿನೆನಪಿಗಾಗಿ ತಾಲೂಕಿನ ಮೇಲಿನಜೂಗಾನಹಳ್ಳಿ ಗ್ರಾಮದಲ್ಲಿ ಮಾ.14ರ ಶುಕ್ರವಾರದಿಂದ ಮಾ.16ರ ಭಾನುವಾರದವರೆಗೆ “ಟೆನ್ನಿಸ್ (ವಿಕ್ಕಿ) ಬಾಲ್ ಕ್ರಿಕೆಟ್ ಟೂರ್ನಿಮೆಂಟ್” ನ್ನು ಆಯೋಜನೆ ಮಾಡಲಾಗಿದೆ.

ಮೂರು ದಿನಗಳ ಕಾಲ ನಡೆಯುವ ಟೆನ್ನಿಸ್ ಬಾಲ್ (ವಿಕ್ಕಿ) ಕ್ರಿಕೇಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಆಸಕ್ತಿಯುಳ್ಳ ತಂಡಗಳು ತಮ್ಮ ತಂಡದ ಹೆಸರನ್ನು ಮಾ.12ರ ಬುಧವಾರದಂದು ಸಂಜೆ 6 ಗಂಟೆಯೊಳಗೆ ನೊಂದಾಯಿಸಿಕೊಳ್ಳತಕ್ಕದ್ದು.

ಬಹುಮಾನ ಹಾಗೂ ಪ್ರವೇಶ ಶುಲ್ಕ ವಿವರ

ಪ್ರಥಮ ಬಹುಮಾನ : ರೂ. 25001/- ಮತ್ತು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಬಹುಮಾನ : ರೂ. 15001/- ಮತ್ತು ಟ್ರೋಫಿ ಇರುತ್ತದೆ. ಪ್ರವೇಶ ಶುಲ್ಕ 1999 ನಿಗದಿ ಮಾಡಲಾಗಿದೆ.

ನಿಬಂಧನೆಗಳು : ಎಲ್ಲಾ ಪಂದ್ಯಗಳು ಐ.ಸಿ.ಸಿ. ನಿಯಮಗಳಿಗೆ ಒಳಪಟ್ಟಿರುತ್ತವೆ (ಲೆಗ್‌ಬೈಸ್ & ಎಲ್.ಬಿ. ಡಬ್ಲ್ಯೂಯೊ ಹೊರತುಪಡಿಸಿ). ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ ಇದಕ್ಕೆ ಪ್ರತಿಯಾಗಿ ಅನಧಿಕೃತವಾಗಿ ವಾಗ್ವಾದ ಮಾಡಿದ್ದಲ್ಲಿ ಅಂತಹ ತಂಡವನ್ನು ಟೂರ್ನಿಯಿಂದ ಕೈ ಬಿಡಲಾಗುವುದು. ಪಂದ್ಯದ ಪ್ರತಿ ಇನ್ನಿಂಗ್ಸ್ 6 ಓವರ್‌ಗಳಿಗೆ ಸೀಮಿತವಾಗಿರುತ್ತದೆ. ಒಂದು ತಂಡದಲ್ಲಿ ಆಡಿರುವ ಆಟಗಾರನಿಗೆ ಮತ್ತೊಂದು ತಂಡದಲ್ಲಿ ಆಡಲು ಅವಕಾಶವಿಲ್ಲ. ಯಾವುದೇ ತಂಡ ನಿರ್ದಿಷ್ಟ ಸಮಯಕ್ಕೆ ಹಾಜರಿಲ್ಲವಾದಲ್ಲಿ ಅಂತಹ ತಂಡಕ್ಕೆ ವಾಕ್‌ವರ್ ನೀಡಲಾಗುವುದು. ಪ್ರತಿ ದಿನ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ಇರುತ್ತದೆ. ಪ್ರತಿ ಆಟಗಾರರು ಆಧಾರ್ ಕಾರ್ಡ್‌ನ್ನು ಜೊತೆಯಲ್ಲಿ ಕಡ್ಡಾಯವಾಗಿ ತರತಕ್ಕದ್ದು. (ಒ.ಟಿ.ಪಿ. ಮುಖಾಂತರ ಪರೀಕ್ಷಿಸಲಾಗುವದು). ಒಂದು ತಂಡದಲ್ಲಿ ಒಂದೇ ಊರಿನ ಹಾಗೂ ಒಂದೇ ವಾರ್ಡ್‌ ಆಟಗಾರರು ಮಾತ್ರ ಆಡಬೇಕು.

ಹೆಚ್ಚಿನ‌ ಮಾಹಿತಿಗಾಗಿ ಗೋಪಾಲಕೃಷ್ಣ : 9686326887, ಸುನಿಲ್ : 6361591407, ಸುರೇಶ್ : 9110487161, ಮುನಿರಾಜು : 8884978979, ಮುತ್ತರಾಜು : 9066333374, ರಾಜು : 7486949414 ಇವರನ್ನು ಸಂಪರ್ಕಿಸಿ

Ramesh Babu

Journalist

Recent Posts

DRI ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ: ಕ್ಯಾಪ್ಸೂಲ್ ರೂಪದಲ್ಲಿ ಚಿನ್ನ ಸಾಗಾಟ: 5 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶ

DRI (Directorate of Revenue Intelligence) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, 5 ಜನ ಆರೋಪಿಗಳ ಬಂಧನ ಮಾಡಿ ಬಂಧಿತರಿಂದ…

2 hours ago

ಭ್ರಷ್ಟ ಅಧಿಕಾರಿ ಮನೆಯಲ್ಲಿ ಲೋಕಾ ತಲಾಶ್: ಆದಾಯ ಮೀರಿದ ಶೇ 120ರಷ್ಟು ಆಸ್ತಿ ಪತ್ತೆ

ಬಳ್ಳಾರಿಯಲ್ಲಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಣ್ಣ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕಾರಣಕ್ಕೆ ಸಂಬಂಧಿಸಿದಂತೆ ಬಗೆದೊಷ್ಟು ಬಯಲಾಗುತ್ತಿದೆ ಭ್ರಷ್ಟ…

2 hours ago

ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ಬೃಹತ್ ಪಾದಯಾತ್ರೆ

ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ಇಂದು ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಯಿತು. ಬಿಜೆಪಿ ಯುವ ಮುಖಂಡ ಹಾಗೂ ಹರಿಕೃಷ್ಣ…

12 hours ago

ತಹಶೀಲ್ದಾರ್‌ ಕಚೇರಿಗೆ ಶಾಸಕ ಕೊತ್ತೂರು ಮಂಜುನಾಥ್‌ ದಿಢೀರ್‌ ಭೇಟಿ: ಅಧಿಕಾರಿಗಳಿಗೆ ತರಾಟೆ, ತ್ವರಿತವಾಗಿ ಕಡತ ವಿಲೇವಾರಿಗೆ ಸೂಚನೆ

ಕೋಲಾರ: ಶಾಸಕ ಕೊತ್ತೂರು ಮಂಜುನಾಥ್‌ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್‌ ಕಚೇರಿಗೆ ದಿಢೀರನೇ ಭೇಟಿ ನೀಡಿ ಕಡತ ಪರಿಶೀಲಿಸಿ ಅಧಿಕಾರಿಗಳು ಹಾಗೂ…

15 hours ago

ಅಂತರ್ಜಲ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತ: ಒಂದು ತಿಂಗಳಲ್ಲಿ 1.15 ಮೀ. ನೀರಿನ ಮಟ್ಟ ಕುಸಿತ: ಬೋರ್‌ವೆಲ್‌ಗಳಲ್ಲಿ ಬರಿದಾದ ನೀರು: ರೈತ ಕಂಗಾಲು

ದೊಡ್ಡಬಳ್ಳಾಪುರದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೆ ಹೆಚ್ಚುತ್ತಿದೆ‌. ಈ ಹಿನ್ನೆಲೆ ತೀವ್ರ ಜಲಕ್ಷಾಮದ ಕಾರ್ಮೋಡ ಆವರಿಸಿದಂತಿದೆ‌. ವರ್ಷದಿಂದ ವರ್ಷಕ್ಕೆ ಏರುತ್ತಿರುವ…

17 hours ago

ಹೃದಯವಿದ್ರಾವಕ ಘಟನೆ: ಒಂದೇ ದಿನ ಪತಿ-ಪತ್ನಿ ದಾರುಣ ಸಾವು

ಬೆಳಗಾವಿಯಲ್ಲಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ದಿನ ಪತಿ-ಪತ್ನಿ ದಾರುಣ ಸಾವನ್ನಪ್ಪಿದ್ದಾರೆ. ಅರವಳ್ಳಿ…

24 hours ago