ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸುವಾಗ ಹುಷಾರಾಗಿರಿ…!

ಮಾವಿನ ಹಣ್ಣುಗಳನ್ನು ರಾಸಾಯನಿಕಗಳಿಂದ ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ  ಕಮಿಷನರ್ ಟಾಸ್ಕ್ ಫೋರ್ಸ್, ಸೌತ್ ವೆಸ್ಟ್ ಝೋನ್ ತಂಡವು ದಾಳಿ ನಡೆಸಿ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ.

ಕಮಿಷನರ್ ಟಾಸ್ಕ್ ಫೋರ್ಸ್, ಸೌತ್ ವೆಸ್ಟ್ ಝೋನ್ ತಂಡವು ಸುಲ್ತಾನ್ ಬಜಾರ್ ಪೊಲೀಸರೊಂದಿಗೆ ನ್ಯೂ ಲಿಬರ್ಟಿ ಹಣ್ಣಿನ ಅಂಗಡಿ ಮತ್ತು ಹೈದರಾಬಾದ್‌ನ ಗಡಿಯಾರ ಗೋಪುರದ ಎದುರು ಮೊಅಜ್ಜಮ್ ಜಾಹಿ ಮಾರ್ಕೆಟ್‌ನಲ್ಲಿರುವ ಲಕ್ಕಿ ಎಂಬ ಹೆಸರಿನ ಎರಡು ಹಣ್ಣಿನ ಅಂಗಡಿಗಳ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇರ್ಫಾನ್ ಖಾನ್ ಮತ್ತು ಮೊಹಮ್ಮದ್ ಹುಸೇನ್ ಬಂಧಿತ ಆರೋಪಿಗಳು.

ಮಾವಿನ ಹಣ್ಣುಗಳನ್ನು ಹಣ್ಣಾಗಿಸಲು ಕೃತಕವಾಗಿ ಮಾಗಿಸುವ ವಿಧಾನದಲ್ಲಿ ತೊಡಗಿರುವುದು ಕಂಡು ಬಂದಿದ್ದು, ಬಂಧಿತರಿಂದ 3 ಲಕ್ಷ ರೂ. ಮೌಲ್ಯದ ಮಾವಿನ ಹಣ್ಣುಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಸ್ತುತ ಪವಿತ್ರ ರಂಜಾನ್ ಮತ್ತು ಮದುವೆ ಸಭೆ ಸಮಾರಂಭಗಳಲ್ಲಿ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆಯಿರುವ ಕಾರಣ, ಈ ಹಣ್ಣಿನ ಮಾರಾಟಗಾರರು ಪರಿಪಕ್ವವಾಗದ ಹಣ್ಣುಗಳನ್ನು ಮಾರುಕಟ್ಟೆಗೆ ತರಲು ಎಫ್‌ಎಸ್‌ಎಸ್‌ಎಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಎಥಿಲೀನ್‌ನಂತಹ ರಾಸಾಯನಿಕ ಬಳಸಿ ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ .

ಕೃತಕವಾಗಿ ಮಾಗಿದ ಹಣ್ಣನ್ನು ತಿಂದರೆ ಉಸಿರಾಟ ತೊಂದರೆ ಮತ್ತು ಚರ್ಮದ ಕಾಯಿಲೆ ಸೇರಿದಂತೆ ಇತರೆ ಕಾಯಿಲೆಗಳು ಬಂದು ಜನರ  ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ.

ಆರೋಪಿಗಳು ತಮ್ಮ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಹಾನಿಕಾರಕ ರಾಸಾಯನಿಕಗಳನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಮತ್ತು ಅಮಾಯಕ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಮತ್ತು FSSAI ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ.

Leave a Reply

Your email address will not be published. Required fields are marked *