ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯ ರಕ್ಷಣೆ

ದೊಡ್ಡಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ನಾಗದೇನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಸುಮಾರು 50 ವರ್ಷದ ನಿರಾಶ್ರಿತ ಮಾನಸಿಕ ಖಿನ್ನತೆಗೆ ಒಳಗಾಗಿ ಚಳಿ, ಗಾಳಿಗೆ ನಲುಗಿ ನೀರು, ಊಟ, ವಸತಿ ಹಾಗೂ ಸ್ನಾನ ಇಲ್ಲದೆ ಸುಮಾರು 4-5 ತಿಂಗಳಿಂದ ಚಿಕತ್ಸೆ ಸಿಗದೆ ಅನಾರೋಗ್ಯದಿಂದ ಬಳಲಿದ ವ್ಯಕ್ತಿಯನ್ನು ರಕ್ಷಿಸಿ, ಪವಿತ್ರ ರೂರಲ್ ಡೆವಲಪ್ಮೆಂಟ್ ಸಂಸ್ಥೆ ವೃದ್ಧಾಶ್ರಮಕೆ ದಾಖಲಿಸಿದ ಜಗದೀಶ ಎನ್ ಎಂ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ. ಚಿಕ್ಕಬಳ್ಳಾಪುರ ಹಾಗೂ ಪ್ರಭಾರ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ.

ವ್ಯಕ್ತಿಗೆ ಪುನರ್ವಸತಿ ಕಲ್ಪಿಸಲು ವ್ಯತಿಯೊಂದಿಗೆ ಸುಮಾರು 20 ದಿನಗಳ  8-10 ಗಂಟೆಗಳ ಸಂಭಾಷಣೆ ಹಾಗೂ ಆಪ್ತ ಸಮಾಲೋಚನೆ ನಡೆಸಿ ಮನವೊಲಿಸಲು ಯತ್ನಿಸಿ ಯಶಸ್ಸು  ಕಾಣಲಾಯಿತು.

ಸುಮಾರು ನಾಲ್ಕೈದು ತಿಂಗಳಿನಿಂದ ಬೆಂಗಳೂರಿನ ತನ್ನ ಕುಟುಂಬದಿಂದ ದೂರವಾಗಿ ಒಂಟಿಯಾಗಿದ್ದ ಮಾನಸಿಕ ಖಿನ್ನತೆಯ ವ್ಯಕ್ತಿ, ಯಾರಾದರೂ ನೀರು, ಊಟ, ಬ್ರೆಡ್, ಬಿಸ್ಕತ್ ಹಾಗೂ ನೀರಿನ ಬಾಟಲ್ ನ್ನು ಅಕ್ಕ ಪಕ್ಕದ ಮನೆಯವರು, ಗ್ರಾಮಸ್ಥರು ಹಾಗು ರಾಷ್ಟ್ರೀಯ ಹೆದ್ದಾರಿ ದಾರಿ ಹೋಕರು ನೀಡುತ್ತಿದ್ದರು. ಅದೇ ಆತನಗೆ ಆಹಾರದ ಮೂಲವಾಗಿತ್ತು. ನಿರಾಶ್ರಿತ ವ್ಯಕ್ತಿಗೆ ಆಸರೆಯ ಕೈಗಳ ಅವಶ್ಯಕತೆಯೂ ಇತ್ತು.

ಅನೇಕ ರೀತಿಯ ಮಾನಸಿಕ ಒತ್ತಡದಲ್ಲಿ ನಲುಗಿ ಸೂಕ್ತ ಚಿಕಿತ್ಸೆ ದೊರಕದೆ ಒತ್ತಡ ಖಿನ್ನತೆಯಾಗಿ ಮಾನಸಿಕ ಅಸ್ವಸ್ಥತೆ ಅವರಿಸಿ ಅದೆಷ್ಟೋ ಜನರು ಸಾರ್ವಜನಿಕ ಸ್ಥಳಗಳಲ್ಲಿ ಅಸುರಕ್ಷಿತ ಜೀವನ ನಡೆಸುತ್ತಿದ್ದಾರೆ. ಅವರನ್ನೆಲ್ಲ ರಕ್ಷಿಸುವುದು ಹಾಗು ಸೂಕ್ತ ಸ್ಥಳಕ್ಕೆ ರವಾನಿಸುವುದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ಕರ್ತವ್ಯ ಎಂದು ಮಾನಸಿಕ ಆರೋಗ್ಯ ಕಾಯ್ದೆ -2017 ಸ್ಪಷ್ಟಪಡಿಸಿದೆ ಹಾಗೂ ಕುಟುಂಬಸ್ಥರು ಇದ್ದೂ ಅವರನ್ನು ಈ ರೀತಿ ಬಿಡುವುದು ಅಥವಾ ಸೂಕ್ತ ಚಿಕಿತ್ಸೆ ಕೊಡಿಸಲು ಅಸಡ್ಡೆ ತೋರುವುದು ಅಪರಾಧವಾಗಿದೆ.

ಪೋಷಕರು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಹೊರಹಾಕುವ ಸಂಸ್ಕೃತಿ ಬಾರದ ರೀತಿ. ಎಲ್ಲಾ ಮಕ್ಕಳಿಗೆ ಮೌಲ್ಯ ಶಿಕ್ಷಣ ಕಡ್ಡಾಯವಾಗಿ ತಿಳಿಸಬೇಕು.

ಈ ರೀತಿಯ ಸಂದರ್ಭಗಳು ಕಂಡುಬಂದರೆ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಬಹುದಾಗಿದೆ.

ರಕ್ಷಣಾ ಕಾರ್ಯಾದಲ್ಲಿ ಸಹಕಾರಿಯಾದ ಹಾಗು ವ್ಯಕ್ತಿಗೆ ತಾತ್ಕಾಲಿಕ ಪುನರ್ವಸತಿ ದೊರಕಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುಮತಿ ಪಡೆದ ಸಂಸ್ಥೆ ಪವಿತ್ರ ರೂರಲ್ ಡೆವಲಪ್ಮೆಂಟ್ ಸಂಸ್ಥೆ, (ವೃದ್ಧಾಶ್ರಮ)ದೊಡ್ಡಬಳ್ಳಾಪುರ ಮುಖ್ಯಸ್ಥರಾದ ಎಂ ಸಿದ್ದಗಂಗಯ್ಯ ರವರಿಗೆ ಧನ್ಯವಾದಗಳು.‌ಈ ರೀತಿಯ ನಿಸ್ವಾರ್ಥ ಸೇವೆಯ ಸಂಸ್ಥೆಗೆ ಇನ್ನಷ್ಟು ಸೇವೆಯ ಅವಕಾಶ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಜಗದೀಶ ಎನ್ ಎಂ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ. ಚಿಕ್ಕಬಳ್ಳಾಪುರ ಹಾಗೂ ಪ್ರಭಾರ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ತಿಳಿಸಿದರು.

Ramesh Babu

Journalist

Recent Posts

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

9 hours ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

12 hours ago

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಆರೋಪ: 112 ತುರ್ತು ಸೇವೆ ಸಿಬ್ಬಂದಿಗೆ ಗಾಯ: ಇಬ್ಬರು ಆರೋಪಿಗಳು ವಶಕ್ಕೆ

ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…

14 hours ago

ಮ್ಯಾನ್‌ಹೋಲ್ ತುಂಬಿ ಹೆದ್ದಾರಿಗೆ ಹರಿದ ಕೊಳಚೆ ನೀರು

ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…

17 hours ago

ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಚೇರಿಯ ಕೆಲ ಅಧಿಕಾರಿಗಳು, ಸಿಬ್ಬಂದಿ ನಾಪತ್ತೆ: ಅಧಿಕಾರಿಗಳಿಗಾಗಿ ಕಾಯುತ್ತಿರುವ ಸಾರ್ವಜನಿಕರು

ದೊಡ್ಡಬಳ್ಳಾಪುರ: ನಗರದ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ…

18 hours ago

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

2 days ago