ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯೊಂದಿಗೆ ಕ್ರೀಡೆ ಕೂಡ ಅತ್ಯವಶ್ಯಕವಾಗಿದ್ದು, ಮಕ್ಕಳು ಆಟೋಟಗಳಲ್ಲೂ ಹೆಚ್ಚಾಗಿ ಭಾಗವಹಿಸಬೇಕು ಎಂದು ಹಿರಿಯ ದೈಹಿಕ ಶಿಕ್ಷಕ ಶರಣಪ್ಪ ತಿಳಿಸಿದರು.
ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ವಿದ್ಯಾನಿಧಿ ಕಾಮರ್ಸ್ ಅಂಡ್ ಮ್ಯಾನೇಜ್ ಮೆಂಟ್ ಸ್ಟಡೀಸ್ ವತಿಯಿಂದ ಆಯೋಜಿಸಿದ 2023-24ನೇ ಸಾಲಿನ ಕ್ರೀಡಾ ಕೂಟದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಇತ್ತೀಚೆಗೆ ಅಂಕಗಳಿಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಸಲು ಸಹಕಾರಿಯಾಗುತ್ತದೆ. ಇದರಿಂದ ಕ್ರೀಡಾ ಕೂಟಗಳ ಮೂಲಕ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಈ ವೇಳೆ ಮಾತನಾಡಿದ ಪ್ರಾಂಶುಪಾಲರಾದ ದಿನೇಶ್, ಕ್ರೀಡೆಯಲ್ಲಿ ಶಿಕ್ಷಣದೊಂದಿಗೆ ಸಾಧನೆ ಮಾಡಬೇಕು. ಸತತ ಪ್ರಯತ್ನದಿಂದ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಇದರಿಂದ ಕಲಿಕೆಯೊಂದಿಗೆ ಪ್ರತಿದಿನ ಕ್ರೀಡೆಗೆ ಸಮಯ ನೀಡಬೇಕು ಎಂದರು.
ಈ ವೇಳೆ ಎಚ್ ಒಡಿ ವಿಜಯ್ ಕುಮಾರ್ ಡಿ.ಕೆ, ಶಿವಾನಂದ.ಜಿ, ಶ್ರೀಧರ್, ತೇಜಸ್ವಿನಿ, ಕೃಷ್ಣ ಚೈತನ್ಯ, ಹೇಮಂತ್, ನಂಜುಂಡಪ್ಪ ಹಾಜರಿದ್ದರು.