ಮಾಜಿ ಸಿಎಂ ಯಡಿಯೂರಪ್ಪ ಪೋಕ್ಸೋ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ನೂತನ ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿ, ಮಾಜಿ ಸಿಎಂ ಯಡಿಯೂರಪ್ಪ ರೈತ ನಾಯಕರು, ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದೆಲ್ಲಾ ರಾಜಕೀಯ ಪಿತೂರಿ ಅಷ್ಟೇ. ಈ ವಯಸ್ಸಿನಲ್ಲಿ ಇಂಥಹದನ್ನೆಲ್ಲಾ ಮಾಡಲು ಸಾಧ್ಯನಾ..? ಪಕ್ಷಕ್ಕೆ ಹಾಗೂ ಅವರಿಗೆ ಮುಜುಗರ ಮಾಡಿ, ಅದರ ರಾಜಕೀಯ ಲಾಭವನ್ನು ತೆಗೆದುಕೊಳ್ಳುವ ದುರುದ್ದೇಶ ಕಾಂಗ್ರೆಸ್ ಗೆ ಇದೆ. ನಮಗೆ ನೂರಕ್ಕೆ ನೂರು ನಮ್ಮ ನಾಯಕರ ಮೇಲೆ ನಂಬಿಕೆಯಿದೆ. ಅವರು ಇಂತಹ ಕೃತ್ಯ ಎಸಗಲು ಅಸಾಧ್ಯ ಎಂದು ಹೇಳಿದ್ದಾರೆ.
*ಯಡಿಯೂರಪ್ಪ ಬಂಧನ ಮಾಡುವ ವಿಚಾರ*
ಯಾವುದೇ ಕಾರಣ ಇಲ್ಲದೆ ನಮ್ಮ ನಾಯಕರನ್ನು ಅರೆಸ್ಟ್ ಮಾಡಿದರೆ ಹೋರಾಟ ನಡೆಸುತ್ತೇವೆ. ಕಾನೂನು ಬಾಹಿರವಾಗಿ ಏನು ಮಾಡಲು ಸಾಧ್ಯವಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನಾದರೂ ಮಾಡಬಹುದು. ನಮ್ಮ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು ಸದೃಢವಾಗಿದ್ದೇವೆ. ಮೊನ್ನೆ ತಾನೆ ಎಷ್ಟು ಸದೃಡವಾಗಿದ್ದೇವೆ ಎಂದು ತೋರಿಸಿದ್ದೇವೆ. ನಾವು ಬೀದಿಗೆ ಇಳಿಬೇಕು ಎಂದರೆ ಇಳಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.
ನಟ ದರ್ಶನ್ ಬಂಧನ ವಿಚಾರ
ಯಾರೇ ತಪ್ಪಿತಸ್ಥರು ಆಗಿದ್ದರೂ ಅವರ ಮೇಲೆ ಕ್ರಮ ಆಗಬೇಕು. ಕಾನೂನಿಗಿಂತ ದೊಡ್ಡವರು ಯಾರು ಇರೋದಿಲ್ಲ. ಇನ್ನೊಬ್ಬರನ್ನ ಕೊಲೆ ಮಾಡೋದಕ್ಕೆ ಭಗವಂತ ಶಕ್ತಿ ಕೊಟ್ಟಿಲ್ಲ. ಕೊಲೆ ಎನ್ನುವುದು ಅಮಾನುಷವಾದದ್ದು. ಯಾರು ಕೂಡ ಕೊಲೆ ಮಾಡುವ ಆಲೋಚನೆ ಮಾಡಬಾರದು ಎಂದು ಹೇಳಿದರು.