ಅಕ್ರಮ ಕಲ್ಲು ಗಣಿಗಾರಿಕೆ ಆರೋಪದಡಿ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಮುನಿರತ್ನ ವಿರುದ್ಧ ತಹಶೀಲ್ದಾರ್ ಕೇಸ್ ದಾಖಲು ಮಾಡಿದ್ದರು.
ಜೈ ಭೀಮ್ ಸೇನೆ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ತಹಸೀಲ್ದಾರ್ ಗೆ ದೂರು ನೀಡಿದ್ದರು. ಈ ಹಿನ್ನೆಲೆ ಯಲಹಂಕ ತಹಶೀಲ್ದಾರ್ ಅನಿಲ್ ಅರೋಲಿಕರ್ ದೂರಿನನ್ವಯ ಎಫ್ ಐ ಆರ್ ದಾಖಲಾಗಿದೆ. ಹುಣಸಮಾರನಹಳ್ಳಿ ಗ್ರಾಮ ಸರ್ವೆ ನಂಬರ್ 179 ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಕೇಸ್ ದಾಖಲು ಮಾಡಿದ್ದ ತಹಶೀಲ್ದಾರ್ ಅನಿಲ್ ಅರೋಲಿಕರ್. ಮಾಜಿ ಸಚಿವ ಮುನಿರತ್ನ A4 ಆಗಿ ಎಫ್ ಐ ಆರ್ ನಲ್ಲಿ ದಾಖಲಾಗಿದೆ. A1 ಆನಂದನ್, A2 ಗಣೇಶ್ , A3 ರಾಧಮ್ಮ ಮತ್ತು A4 ಮುನಿರತ್ನ ಆಗಿ ಎಫ್ ಐಆರ್ ನಲ್ಲಿ ದಾಖಲಾಗಿದೆ.