ಕೋಲಾರ: ಜೆಡಿಯು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿ ಮನೀಶ್ ಕುಮಾರ್ ವರ್ಮಾ, ಪಕ್ಷದ ರಾಜ್ಯ ಅಧ್ಯಕ್ಷ ಮಾಜಿ ಶಾಸಕ ಮಹಿಮ ಪಟೇಲ್ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ನಾಗರಾಜ್ ಮತ್ತು ಇತರೆ ಪದಾಧಿಕಾರಿಗಳು ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ಪಕ್ಷದ ಹಿರಿಯ ರಾಜಕಾರಣಿ ಎಚ್.ಡಿ. ದೇವೇಗೌಡರವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮುಂಬರುವ ಚುನಾವಣೆಗಳ ಕುರಿತಂತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮನೀಶ್ ಕುಮಾರ್ ಶರ್ಮ ಅವರು ಜೆಡಿಯು ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸುವುದು ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕಲ್ಲಂಡೂರು ಡಾ ಕೆ.ನಾಗರಾಜ್ ರವರನ್ನು ಆಯ್ಕೆ ಎನ್.ಡಿ.ಎ ಮೈತ್ರಿ ಕೂಟದಿಂದ ನಾವೆಲ್ಲ ಸೇರಿ ಗೆಲ್ಲಿಸಲು ಸಹಕರಿಸಬೇಕು ಮುಂದಿನ ಜಿಪಂ ತಾಪಂ ಚುನಾವಣೆಗೂ ಜೆಡಿಯು ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದು ಡಾ ನಾಗರಾಜ್ ಗೆಲುವ ಹಾಗೂ ರಾಜ್ಯದಲ್ಲಿ ಜೆಡಿಯು ಪಕ್ಷದ ಹಿಂದಿನ ಗತವೈಭವ ತರುವುದು ಮುಖ್ಯ ಗುರಿಯಾಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಹಾರ ರಾಜ್ಯದ ಸಿಎಂ ನಿತೀಶ್ ಕುಮಾರ ಅವರ ಸಲಹಾ ಸಮಿತಿ ಸದಸ್ಯರಾದ ವಿಶಿಷ್ಟ ಮಂಡಲ್, ಅಜಯ್ ರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗಂಗೂರ್, ರೈತ ಘಟಕದ ಅಧ್ಯಕ್ಷ ಶ್ರೀನಿವಾಸ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ, ಪ್ರಧಾನ ಕಾರ್ಯದರ್ಶಿಗಳಾದ ರಂಗನಾಥ್, ಲಕ್ಷ್ಮೀ, ಯುವ ಘಟಕದ ಕಾರ್ಯಾಧ್ಯಕ್ಷ ಲಕನ್, ಉಪಾಧ್ಯಕ್ಷರಾದ ಗಂಗರಾಜು, ಡಿ ಜೆ ಪ್ರಭು, ಕಾರ್ಯದರ್ಶಿಗಳಾದ ಕ್ರಾಂತಿ, ಸೂರ್ಯಪ್ರಕಾಶ್ ಮಾಡಿಕ್, ಶಾಂತ ಕುಮಾರಿ, ಶಿಂದೆ, ಶ್ರೀ ಶೈಲ ಗೌಡ, ನಿಲಿಗಿರಿಯಪ್ಪ, ಶಕುಂತಲಾ ಶೆಟ್ಟಿ, ನಾರಾಯಣ ಸ್ವಾಮಿ ಗೌಡ, ಲಕ್ಷ್ಮೀ ಪತ್ತಾರ್, ಹೈಬತ್ತಿ, ಅಂಬರೀಷ್, ಮಂಜುನಾಥ್ ಗೌಡ, ಸುಮ,ಫಿಜ, ನಿರ್ಮಲ, ಚಂದ್ರು, ಸುರೇಶ ಮಲ್ಲಮ್ಮ, ಸುಬ್ರಮಣಿ, ಬಾಬು, ನಾಗರಾಜ್, ಚಿನ್ಮಯ, ಮುಂತಾದವರು ಇದ್ದರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…