ಹೈದರಾಬಾದ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಚಿಕನ್ ಬಿರಿಯಾನಿ ತಿಂದ ವ್ಯಕ್ತಿಯೊಬ್ಬನ ಗಂಟಲಲ್ಲಿ ಚಿಕನ್ ತುಂಡು ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಅಣ್ಣಾರಾಮ್ ಗ್ರಾಮದ ಸನುಗೋಮುಲ ಶ್ರೀಕಾಂತ್ (39) ಮೃತ ದುರ್ದೈವಿ.
ಮೊದಲು ಮದ್ಯ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ಊಹಿಸಲಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು., ಗಂಟಲಲ್ಲಿ ಮಾಂಸದ ತುಂಡು ಸಿಕ್ಕಿ ಉಸಿರುಗಟ್ಟಿ ಮೃತಪಟ್ಟಿರುವುದು ಪತ್ತೆಯಾಗಿದೆ.
ಮೃತ ಶ್ರೀಕಾಂತ್ ಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಹೈದರಾಬಾದ್ ನಲ್ಲಿ ನೆಲೆಸಿರುವ ಸಹೋದರಿಯನ್ನು ಭೇಟಿಯಾಗಲು ಹೈದರಾಬಾದ್ ಗೆ ಬಂದಿದ್ದರು. ತಂಗಿ ಆಗಲೇ ಮನೆ ಖಾಲಿ ಮಾಡಿ ಬೇರೆ ಮನೆಗೆ ಹೋಗಿದ್ದರು. ಆಗ ಸಹೋದರಿಗೆ ಫೋನ್ ಮಾಡಿ ಎಲ್ಲಿದ್ದೀರ ಎಂದು ಕೇಳಿದ್ದಾರೆ. ಆದರೆ ಅವರು ಔತಣಕೂಟದಲ್ಲಿದ್ದೇವೆ ಬರೋದು ತಡವಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆ ಮದ್ಯದಂಗಡಿಯಲ್ಲಿ ಮದ್ಯಪಾನ ಮಾಡಿ ಚಿಕನ್ ಬಿರಿಯಾನಿ ತಿಂದಿದ್ದಾನೆ. ಚಿಕನ್ ತಿನ್ನುವಾಗ ಕೋಳಿಯ ತುಂಡು ಗಂಟಲಿಗೆ ಸಿಲುಕಿ ಉಸಿರುಗಟ್ಟಿ ರಸ್ತೆ ಬದಿ ಕುಸಿದು ಬಿದ್ದಿದ್ದಾರೆ.