ಮಹಿಳೆ ವಿಚಾರಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ

ಹೊಟ್ಟೆ ಪಾಡಿಗಾಗಿ ದೂರದ ಪಶ್ಚಿಮ ಬಂಗಾಳದಿಂದ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕಾಗಿ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿಗೆ ಬಂದಿದ್ದರು. ದಿನನಿತ್ಯ ಕೆಲಸ ಮುಗಿಸಿ ಒಂದೇ ಶೆಡ್ ನಲ್ಲಿ ಮಲಗುತ್ತಿದ್ದರು. ಮಲಗುವ ವೇಳೆ ಸ್ನೇಹಿತ ಆಡಿದ ಆ ಒಂದು ಮಾತಗೆ ಗಲಾಟೆ ಆಗಿದೆ. ಗಲಾಟೆ ಸ್ನೇಹಿತನನ್ನೇ ಬಾರದ ಲೋಕಕ್ಕೆ ಹೋಗುವಂತೆ ಮಾಡಿದೆ.  ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿಗಳು ಈಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಅತಿಥಿಗಳಾಗಿದ್ದಾರೆ.

ಹೌದು, ಪಶ್ಚಿಮ ಬಂಗಾಳ ಮೂಲದ ಸುಶಾಂತ್ ಸಿಂಗ್ ಮತ್ತು ಸಾಧನ್ ಸಿಂಗ್ ಬಂಧಿತ ಆರೋಪಿಗಳು. ಕೂಲಿ ಕೆಲಸಕ್ಕಾಗಿ ಒಂದೇ ಗ್ರಾಮದ ಸ್ನೇಹಿತರು ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ಸೆ.8ರಂದು ಕೆಲಸ ಮುಗಿಸಿ ಮಲಗುವ ವೇಳೆ  ಕೈರ್ ಸಿಂಗ್ (29) ಎಂಬಾತ ಜೊತೆಯಲ್ಲಿ ಜಗಳವಾಗುತ್ತದೆ. ಈ ವೇಳೆ ಶೆಡ್ ನಲ್ಲಿದ್ದ ಸ್ನೇಹಿತರು ಮನಸ್ಸಿಗೆ ಬಂದ ಹಾಗೆ ಹಲ್ಲೆ ಮಾಡುತ್ತಾರೆ. ಜಗಳದ ನಡುವೆ ಚಾಕುವಿನಿಂದ ಕುತ್ತಿಗೆಗೆ ಇರಿಯುತ್ತಾರೆ. ಕುತ್ತಿಗೆ ಹಿರಿದ ಕಾರಣ ಕೈರ್ ಸಿಂಗ್ ಗೆ ಗಂಭೀರ ಗಾಯಗಳಾಗಿದ್ದವು, ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೆ.11ರಂದು ಸಾವನಪ್ಪುತ್ತಾನೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸುತ್ತಾರೆ.

ಆರೋಪಿಗಳು ಕೊಲೆ ಮಾಡಿ ಪಶ್ಚಿಮ ಬಂಗಾಳಕ್ಕೆ ಎಸ್ಕೇಪ್ ಆಗಿರುತ್ತಾರೆ. ಆರೋಪಿಗಳ ಪತ್ತೆಗಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪಶ್ಚಿಮ ಬಂಗಾಳಕ್ಕೆ ಹೋಗುತ್ತಾರೆ. ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಗಳ ಮನೆ ಬಳಿ ಹೋದಾಗ ಮಾರಕಾಸ್ತ್ರಗಳನ್ನು ಹಿಡಿದು ಪೊಲೀಸರ ಮುಂದೆ ರಂಪಾಟ ಮಾಡುತ್ತಾರೆ. ಆದರೂ ಕೂಡ ಆರೋಪಿಗಳನ್ನು ವಶಕ್ಕೆ ಪಡೆಯಲು ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವ ತಂಡ ಯಶಸ್ವಿಯಾಗಿದ್ದಾರೆ‌.

ಕೊಲೆಗೆ ಕಾರಣವಾಗಿದ್ದು ಅಕ್ರಮ ಸಂಬಂಧ. ನೀನು ಮದುವೆ ಆಗಿರುವ ಹುಡುಗಿಯ ಜೊತೆಯಲ್ಲಿ, ನನಗೆ ಮೊದಲು ಸಂಬಂಧವಿತ್ತು. ನಾನು ಅನುಭವಿಸಿದ ಹುಡುಗಿಯನ್ನು ನೀನು ಮದುವೆ ಆಗಿದ್ದೀಯ ಎಂದು ಕೈರ್ ಸಿಂಗ್ ಸ್ನೇಹಿತರ ಮುಂದೆ ಹೇಳಿದಾಗ, ಇಬ್ಬರು ಸ್ನೇಹಿತರು ರೊಚ್ಚಿಗೆದ್ದು, ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಕೆಲಸ ಮುಗಿಸಿ ಉಂಡು ಮಲಗುವ ಸಮಯದಲ್ಲಿ ಆಡಿದ ಆ ಒಂದು ಮಾತು, ಒಬ್ಬನನ್ನು ಸ್ಮಶಾನಕ್ಕೆ ಕಳಿಸಿದರು, ಮತ್ತಿಬ್ಬರು ಜೈಲು ಪಾಲಾಗಿದ್ದಾರೆ.  ಆರೋಪಿಗಳನ್ನು ಹಿಡಿಯುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ ಮತ್ತು ತಂಡ ಯಶಸ್ವಿಯಾಗಿದ್ದಾರೆ.

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

10 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

15 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

18 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago