ತಡರಾತ್ರಿ 8 ಗಂಟೆ ಸಮಯದಲ್ಲಿ ಹಾಲು ತೆಗೆದುಕೊಂಡು ಮನಗೆ ಬರುವ ಸಮಯದಲ್ಲಿ, ಮಹಿಳೆಯನ್ನ ಹಿಂಬಾಲಿಸಿ ಬೈಕ್ ನಲ್ಲಿ ಬಂದ ಸರಗಳ್ಳ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾನೆ.
ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಹಾಲು ತಗೆದುಕೊಂಡು ವಾಪಸ್ ಮನೆಗೆ ಬರುವಾಗ ಮಹಿಳೆಯ ಮಾಂಗಲ್ಯಸರ ಸರಗಳ್ಳನ ಪಾಲಾಗಿದೆ
ನಗರದ ಶಾಂತಿನಗರದ ನಿವಾಸಿ ನಿರ್ಮಲ, ತನ್ನನ್ನೇ ಹಿಂಬಾಲಿಸಿ ಕೊಂಡು ಬರುತ್ತಿರುವ ಬೈಕ್ ಸವಾರರನ್ನ ಗಮನಿಸಿದ ಆಕೆ ಸರವನ್ನ ಜೋಪಾನವಾಗಿ ಹಿಡಿದು ಕೊಂಡಿದ್ದಾರೆ, ರಸ್ತೆಯಲ್ಲಿ ಯಾರು ಇಲ್ಲದನ್ನ ಗಮಿಸಿದ ಆತ ಆಕೆಯ ಮಾಂಗಲ್ಯಸರಕ್ಕೆ ಕೈಹಾಕಿದ್ದಾನೆ.
ಮಹಿಳೆ ತನ್ನ ಸರವನ್ನ ಭದ್ರವಾಗಿ ಹಿಡಿದುಕೊಂಡಿದ್ದರಿಂದ ಮೂಕ್ಕಾಲು ಭಾಗದ ಸರ ಕಳ್ಳನ ಕೈ ಸೇರಿದೆ, ಮಾಂಗಲ್ಯಸರ ಎಗರಸಿ ಸರಗಳ್ಳ ಕ್ಷಣದಲ್ಲೇ ಪರಾರಿಯಾಗಿದ್ದಾನೆ, ಒಟ್ಟು ಒಂದು ಲಕ್ಷದ ಐವತ್ತು ಸಾವಿರ ರೂ. ಮೌಲ್ಯದ 38 ಗ್ರಾಂ ತೂಕದ ಮಾಂಗಲ್ಯಸರವಾಗಿದ್ದು , ನಿರ್ಮಲರ ಬಳಿ ಈಗ 12 ಗ್ರಾಂ ಸರ ಮಾತ್ರ ಇದೆ. 26 ಗ್ರಾಂ ಸರ ಕಳ್ಳನ ಪಾಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ತಾಲೂಕಿನಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಗಳ್ಳರ ಎಡೆಮುರಿ ಕಟ್ಟುವಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕಿದೆ.