ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮಹಿಳಾ ಅಭ್ಯರ್ಥಿ ಹಾಗೂ ಮಹಿಳಾ ಮತದಾರರನ್ನು ಕುರಿತು ವೈಯಕ್ತಿಕ ನಿಂದನೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಪ್ರಮೀಳಾ ಮಹದೇವ್ ಅವರು ಮನವಿ ಸಲ್ಲಿಸಿದ್ದಾರೆ.
ಏಪ್ರಿಲ್ 17 ರಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಈ ಕುರಿತು ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮಹಿಳೆಯರ ಬಗ್ಗೆ ಚುನಾವಣಾ ಪ್ರಚಾರಗಳಲ್ಲಿ ಅವಹೇಳನಕಾರಿಯಾಗಿ, ವೈಯಕ್ತಿಕ ನಿಂದನೆ, ಜಾತಿನಿಂದನೆ ಹಾಗೂ ತೀರಾ ಮುಜುಗರ ಉಂಟುಮಾಡುವ ಮಾತುಗಳು ಕಂಡು ಬಂದಲ್ಲಿ ಚುನಾವಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿ ಸೂಕ್ತ ಕಾನಾನುಕ್ರಮ ಜರುಗಿಸಿ, ಮಹಿಳೆಯರ ಆತ್ಮಸ್ಥೈರ್ಯ ಮತ್ತು ಗೌರವ ಕಾಪಾಡುವಂತೆ ಒತ್ತಾಯಿಸಿದ್ದಾರೆ.