ಮಹಿಳೆಯರು ಹೈನುಗಾರಿಕೆಯಿಂದ ಸ್ವಾಭಿಮಾನ ಬದುಕು ಕಟ್ಟಿಕೊಂಡಿದ್ದಾರೆ-ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್

ಕೋಲಿಗೆರೆಯ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡದ ನೂತನವಾಗಿ ನಿರ್ಮಾಣ ಮಾಡಲಾದ ಮೊದಲನೆಯ ಮಹಡಿ ಕಟ್ಟಡ ಹಾಗೂ ತರಬನಹಳ್ಳಿಯಲ್ಲಿ ಮಹಿಳಾ ಹಾಲು ಉತ್ಪಾದಕ ಸಹಕಾರಿ ಸಂಘದಡಿ ಬಮೂಲ್ ವತಿಯಿಂದ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೆಎಂಎಫ್ ಮತ್ತು ಬಮೂಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಗ್ರಾಮಾಂತರ ಭಾಗದಲ್ಲಿ ಮಹಿಳೆಯರು ಅತ್ಯಂತ ಸ್ವಾಭಿಮಾನದಿಂದ ಜೀವನ ರೂಪಿಸಿಕೊಂಡಿದ್ದಾರೆ. ಇದಕ್ಕೆ ಹೈನುಗಾರಿಕೆಯೇ ಸಾಕ್ಷಿ ಎಂದರು.

ತರಬನಹಳ್ಳಿಯಲ್ಲಿ ಮಹಿಳಾ ಎಂಪಿಸಿಎಸ್ ಲಾಭದಾಯಕವಾಗಿ ಮುನ್ನಡೆಯುತ್ತಿದ್ದು, ಇತರೆ ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ ಮಾದರಿಯಾಗಿದೆ. ಮಹಿಳೆಯರು ಯಾವುದೇ ಅಂಜಿಕೆ, ಅಳುಕಿಲ್ಲದೆ ಜೀವನ ಮಾಡುವಂತ ಸಮಾಜ ನಿರ್ಮಾಣವಾಗಬೇಕಿದೆ. ಹೈನುಗಾರಿಕೆ ನಂಬಿದ ರೈತರು ಶ್ರದ್ಧೆಯಿಂದ ಮಾಡಿದರೆ ಎಂದಿಗೂ ನಷ್ಟಕ್ಕೀಡಾಗುವುದಿಲ್ಲ ಎಂದರು.

ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ನೀರನ್ನು ಕೃತಕವಾಗಿ ಸೃಷ್ಟಿಮಾಡಲು ಸಾಧ್ಯವಿಲ್ಲ. ನೀರು ಪ್ರಕೃತಿ ಮಾತೆಯಿಂದ ಮಾತ್ರವೇ ಸೃಷ್ಟಿಸಲು ಸಾಧ್ಯ. ಹೀಗಾಗಿ ನೀರನ್ನು ಮಿತವಾಗಿ ಬಳಸಿ, ವ್ಯರ್ಥ ಮಾಡಬೇಡಿ. ಬೇಸಿಗೆ ಆರಂಭದಲ್ಲಿಯೆ ಪ್ರಾಣಿ-ಪಕ್ಷಿಗಳಿಗೆ ನೀರಿನ ಅಭಾವ ಎದುರಗುವುದರಿಂದ ಮನೆಗಳ ಬಳಿ ಸಣ್ಣ ಸಣ್ಣ ತೊಟ್ಟಿಗಳ ನಿರ್ಮಾಣಕ್ಕೆ ರೈತರಲ್ಲಿ ಮನವಿ ಮಾಡಿದರು.

ಕೋಲಿಗೆರೆ ಹಾಲು ಉತ್ಪಾದಕ ಸಹಕಾರಿ ಸಂಘದ ಮೊದಲನೇ ಮಹಡಿಗೆ ಬಮೂಲ್ ನಿಂದ ತಡಮಾಡದೆ ಅನುದಾನ ನೀಡಲಾಗಿದೆ. ಹಾಲು ಉತ್ಪಾದಕ ಸಂಘಗಳ ಬೆಳವಣಿಗೆಗಳು ಪರೋಕ್ಷವಾಗಿ ರೈತರನ್ನು ಅಭಿವೃದ್ಧಿಯ ಸಂಕೇತವಾಗಿರಲಿವೆ. ಇದು ಸಾಧ್ಯವಾಗಬೇಕಾದರೆ ರೈತರು ಎಂಪಿಸಿಎಸ್ ಗಳಲ್ಲಿ ಯಾವುದೇ ರಾಜಕೀಯ ಮಾಡದೆ ಮುನ್ನಡೆಯಬೇಕು ಎಂದು ತಿಳಿಸಿದರು.

ಇದೇ ವೇಳೆ ರೈತರು ಹಾಲಿನ ದರ ಏರಿಕೆಗೆ ಕೆಎಂಎಫ್ ನಿರ್ದೇಶಕರಿಗೆ ಮನವಿ ಮಾಡಿದರು.

Leave a Reply

Your email address will not be published. Required fields are marked *