ಮಹಿಳೆಯರು ಸ್ವ ಉದ್ಯೋಗದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು-ಅಂಬರೀಶ ಬಿ.ಸಿ.

ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ವ್ಯಾಪ್ತಿಗೆ ಬರುವ ಸೊಣ್ಣಹಳ್ಳಿಪುರ ಗ್ರಾಮದ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಕುರಿತು ಸಂಸ್ಥೆಯ ನಿರ್ದೇಶಕರಾದ ಅಂಬರೀಶ ಬಿ.ಸಿ. ಮಾತನಾಡಿ, ಮೊದಲಿಗೆ ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳನ್ನು ತಿಳಿಸಿದ ಅವರು, ಮಹಿಳೆಯರು ಉತ್ತಮ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮಹಿಳೆಯರು ಹೆಚ್ಚು-ಹೆಚ್ಚು ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಂಡಾಗ ಮಾತ್ರ ದೇಶದ ಆರ್ಥಿಕತೆ ಅಭಿವೃದ್ಧಿ ಹೊಂದುವುದರ ಜೊತೆಗೆ ತಮ್ಮ-ತಮ್ಮ ಕುಟುಂಬಗಳ ಆರ್ಥಿಕತೆಯನ್ನು ಆಭಿವೃದ್ಧಿಪಡಿಸಲು ಸಾಧ್ಯ ಹಾಗೂ ಸಮಾಜದಲ್ಲಿ ತಮ್ಮ ಸ್ಥಾನಮಾನ ಗುರುತಿಸಿಕೊಳ್ಳುವುದಕ್ಕೆ ನಮ್ಮ ಸಂಸ್ಥೆಯು ಹೆಚ್ಚಿನ ಸಹಾಯಕಾರಿಯಾಗಿರುತ್ತದೆ ಎಂದು ಕಿವಿಮಾತು ಹೇಳಿದರು.

ಸಂಸ್ಥೆಯಲ್ಲಿ ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿ ಸ್ವಾವಲಂಬಿ ಜೀವನ ಕಟ್ಟಿಕೊಂಡಿರುವ ಮಹಿಳೆಯರು ಹೆಚ್ಚು ಸಮಾಜದಲ್ಲಿ ಗುರುತಿಸಿಕೊಂಡಿರುವುದು ನಮ್ಮ ಸಂಸ್ಥೆಯ ಹೆಮ್ಮೆಯ ಕೊಡುಗೆಯಾಗಿದೆ ಎಂದು ತಿಳಿಸಿದರು.

ಸಂಸ್ಥೆಯಲ್ಲಿ ಅಣಬೆ ಬೇಸಾಯ ಮತ್ತು ಬ್ಯೂಟಿ ಪಾರ್ಲರ್‌ ತರಬೇತಿ ಪಡೆದು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಸ್ವ ಉದ್ಯೋಗಿಗಳಾದ, ಕಾವ್ಯ ಮತ್ತು ಶೋಭ ರವರು ಭಾಗವಹಿಸಿ ಮಾತನಾಡಿದ ಅವರು, ಮಹಿಳೆರಿಗೆ ಸಮಾಜದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೇ, ಅವುಗಳನ್ನು ಮೆಟ್ಟಿ ಮುನ್ನುಗಿ ನಡೆದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಚಲ ಎಂಬ ಈ ನಾಲ್ಕು ಸಾಧನಗಳಿಂದ ನಮಗೆ ಯಶಸ್ವಿ ಎಂಬ ಸಾಧನೆ ದೊರೆಯುತ್ತದೆ ಎಂದು ತಮ್ಮ ಸಾಧನೆ ಹಾದಿಯ ಅನುಭವವನ್ನು ಹಂಚಿಕೊಂಡರು.

ಇದೇ ಸಂಧರ್ಭದಲ್ಲಿ ಯಶಸ್ವಿ ಸ್ವ ಉದ್ಯೋಗಿಗಳನ್ನು ಸನ್ಮಾನಿಸಲಾಯಿತು.

ಇದೇ ಸಂಧ‌ರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಮುನಿಕೃಷ್ಣ.ಎಂ, ರಾಮಕೃಷ್ಣಪ್ಪ, ಸಂಸ್ಥೆಯ ಸಿಬ್ಬಂದಿ ಸುಗುಣ.ಬಿ, ಕವನ, ನಾಗೇಶ್‌, ಮುನಿಪಟಾಲಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *