ಕಳೆದ ಎರಡು ದಿನಗಳಿಂದ ಸುರಿದ ಮಳೆ ಹಾಗೂ ಬೀಸಿದ ಗಾಳಿಗೆ ದೊಡ್ಡ ಗಾತ್ರದ ಹೆಬ್ಬೇವಿನ ಮರವು ರಸ್ತೆ ಅಡ್ಡಲಾಗಿ ಉರುಳಿ ಬಿದ್ದಿರುವ ಘಟನೆ ಕಳೆದ ರಾತ್ರಿ ತಾಲೂಕಿನ ಮಧುರೆ-ದೊಡ್ಡಬೆಳವಂಗಲ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಈ ಮರ ರಾತ್ರಿ ಧರೆಗೆ ಉರುಳಿಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಇದು ದೊಡ್ಡ ಗಾತ್ರದ ಮರವಾದುದರಿಂದ ತೆರವುಗೊಳಿಸಲು ಆಗದೇ ವಾಹನ ಸವಾರರು ರಾತ್ರಿಯೆಲ್ಲಾ ರಸ್ತೆಯಲ್ಲೇ ಕಾಲ ಕಳೆಯುವಂತಾಗಿತ್ತು.
ಇಂದು ಬೆಳಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.