ಮಳೆ ಎಫೆಕ್ಟ್: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆ: ಯಾವ್ಯಾವ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟೇಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ

ರಾಜ್ಯದ ಹಲವು ಭಾಗಗಳಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರಿಂದ ರೈತರ ಮುಖದಲ್ಲೂ ಕಳೆ ಬಂದಂತಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಅನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಜೋರು ಮಳೆಗೆ ಚಿಕ್ಕಮಗಳೂರು, ಕಾರವಾರ, ಉತ್ತರ ಕರ್ನಾಟಕ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ.

ಮತ್ತೊಂದೆಡೆ ಮೈಸೂರು, ಮಂಡ್ಯ, ಬೆಂಗಳೂರಿನ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ಈ ಜಲಾಶಯದ ನೀರನ್ನು ಕ್ರಸ್ಟ್‌ ಗೇಟ್‌ಗಳ ಮೂಲಕ ನಾಲೆ, ನದಿಗಳಿಗೆ ಹರಿಸಲಾಗಿದೆ.

ಅಲ್ಲದೆ ಇದೀಗ ಈ ಜಲಾಶಯರ ಜಲಾಶಯ ಮಟ್ಟ ಇದೀಗ 100 ಅಡಿಯತ್ತ ಸಮೀಪಿಸುತ್ತಿದೆ. ಹಾಗಾದರೆ ಕೆಆರ್‌ಎಸ್‌ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಇಲ್ಲಿದೆ….

ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 554.44

* ಒಟ್ಟು ಸಾಮರ್ಥ್ಯ – 151.75

* ಇಂದಿನ ನೀರಿನ ಮಟ್ಟ – 46.89

* ಕಳೆದ ವರ್ಷದ ನೀರಿನ ಮಟ್ಟ – 91.02

* ಒಳಹರಿವು – 73,505 ಕ್ಯೂಸೆಕ್‌

* ಹೊರಹರಿವು – 94 ಕ್ಯೂಸೆಕ್‌

ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಒಟ್ಟು ಸಾಮರ್ಥ್ಯ- 123.08 ಟಿಎಂಸಿ

* ಇಂದಿನ ನೀರಿನ ಮಟ್ಟ – 62.53 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ- 97.55 ಟಿಎಂಸಿ

* ಒಳಹರಿವು- 1,14,445 ಕ್ಯೂಸೆಕ್‌

* ಹೊರಹರಿವು – 6981 ಕ್ಯೂಸೆಕ್‌

ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 497.71

* ಒಟ್ಟು ಸಾಮರ್ಥ್ಯ – 105.79

* ಇಂದಿನ ನೀರಿನ ಮಟ್ಟ- 25.42

* ಕಳೆದ ವರ್ಷದ ನೀರಿನ ಮಟ್ಟ – 105.79

* ಒಳಹರಿವು – 47,294 ಕ್ಯೂಸೆಕ್‌

* ಹೊರಹರಿವು – 296 ಕ್ಯೂಸೆಕ್‌

ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 594.36

* ಒಟ್ಟು ಸಾಮರ್ಥ್ಯ – 31.1

* ಇಂದಿನ ನೀರಿನ ಮಟ್ಟ – 6.76

* ಕಳೆದ ವರ್ಷದ ನೀರಿನ ಮಟ್ಟ – 7.50

* ಒಳಹರಿವು – 17,972 ಕ್ಯೂಸೆಕ್‌

* ಹೊರಹರಿವು – 23,937

ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 633.8

* ಒಟ್ಟು ಸಾಮರ್ಥ್ಯ – 37.73

* ಇಂದಿನ ನೀರಿನ ಮಟ್ಟ – 12.70

* ಕಳೆದ ವರ್ಷದ ನೀರಿನ ಮಟ್ಟ – 24.21

* ಒಳಹರಿವು – 21,247 ಕ್ಯೂಸೆಕ್‌

* ಹೊರಹರಿವು – 194 ಕ್ಯೂಸೆಕ್‌

ಕೆಆರ್​ಎಸ್​ ಜಲಾಶಯ

* ಗರಿಷ್ಠ ನೀರಿನ ಮಟ್ಟ – 124.80 ಅಡಿ

* ಒಟ್ಟು ಸಾಮರ್ಥ್ಯ- 49452

* ಇಂದಿನ ನೀರಿನ ಮಟ್ಟ- 97.50 ಅಡಿ

* ಕಳೆದ ವರ್ಷದ ನೀರಿನ ಮಟ್ಟ – 124.65

* ಒಳಹರಿವು – 44,436 ಕ್ಯೂಸೆಕ್‌

* ಹೊರಹರಿವು – 5283 ಕ್ಯೂಸೆಕ್‌

ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 890.58

* ಒಟ್ಟು ಸಾಮರ್ಥ್ಯ – 37.1

* ಇಂದಿನ ನೀರಿನ ಮಟ್ಟ – 21.73

* ಕಳೆದ ವರ್ಷದ ನೀರಿನ ಮಟ್ಟ – 36.81

* ಒಳಹರಿವು – 23,142 ಕ್ಯೂಸೆಕ್‌

* ಹೊರಹರಿವು – 200

ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 696.13

* ಒಟ್ಟು ಸಾಮರ್ಥ್ಯ – 19.52

* ಇಂದಿನ ನೀರಿನ ಮಟ್ಟ – 16.09

* ಕಳೆದ ವರ್ಷದ ನೀರಿನ ಮಟ್ಟ – 19.34

* ಒಳಹರಿವು – 20,749 ಕ್ಯೂಸೆಕ್‌

* ಹೊರಹರಿವು – 3333 ಕ್ಯೂಸೆಕ್‌

ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 657.73

* ಒಟ್ಟು ಸಾಮರ್ಥ್ಯ – 71.54

* ಇಂದಿನ ನೀರಿನ ಮಟ್ಟ – 33.83

* ಕಳೆದ ವರ್ಷದ ನೀರಿನ ಮಟ್ಟ – 69.76

* ಒಳಹರಿವು – 39,348 ಕ್ಯೂಸೆಕ್‌

* ಹೊರಹರಿವು – 170 ಕ್ಯೂಸೆಕ್‌

ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 662.91

* ಒಟ್ಟು ಸಾಮರ್ಥ್ಯ – 51

* ಇಂದಿನ ನೀರಿನ ಮಟ್ಟ – 20.63

* ಕಳೆದ ವರ್ಷದ ನೀರಿನ ಮಟ್ಟ – 35.16

* ಒಳಹರಿವು – 31,815 ಕ್ಯೂಸೆಕ್‌

* ಹೊರಹರಿವು – 99

ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 871.38

* ಒಟ್ಟು ಸಾಮರ್ಥ್ಯ – 8.5

* ಇಂದಿನ ನೀರಿನ ಮಟ್ಟ – 6.76

* ಕಳೆದ ವರ್ಷದ ನೀರಿನ ಮಟ್ಟ – 7.50

* ಒಳಹರಿವು – 17,972 ಕ್ಯೂಸೆಕ್‌

* ಹೊರಹರಿವು – 23,937

ಸೂಫಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 564.33

* ಒಟ್ಟು ಸಾಮರ್ಥ್ಯ – 145.33

* ಇಂದಿನ ನೀರಿನ ಮಟ್ಟ – 57.15

* ಕಳೆದ ವರ್ಷದ ನೀರಿನ ಮಟ್ಟ – 66.11

* ಒಳಹರಿವು – 52,650 ಕ್ಯೂಸೆಕ್‌

* ಹೊರಹರಿವು – 0

Leave a Reply

Your email address will not be published. Required fields are marked *