ಶ್ರೀನಗರದ ಬಳಿ ಇರುವ ರೈಲ್ವೆ ಅಂಡರ್ ಪಾಸ್ ಬಳಿ ಕಾಮಗಾರಿ ನಡೆಯುತ್ತಿರುವ ಬದಿಯ ನೀರು ತುಂಬಿರುವ ಜಾಗದಲ್ಲಿ ಕಾಲಿ ಜಾರಿ ಬಿದ್ದು ವ್ಯಕ್ತಿ ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಸವಾಡಿಯ ಕೋಡಿಹಳ್ಳಿ ಗ್ರಾಮದ ವಿ.ಉಮೇಶ್ (42), ಮೃತಪಟ್ಟಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಮೃತನ ಅಂಗಿಯ ಜೇಬಿನಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆಧಾರ್ ಕಾರ್ಡ್ ಸುಳಿವಿನಿಂದ ಮೃತನ ಹೆಸರು, ವಿಳಾಸ ತಿಳಿದು ಬಂದಿದೆ. ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಡಿದ ನಶೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳೆ ಹಾನಿ, ಮನೆಗಳ ಮೇಲ್ಛಾವಣಿ ಹಾರಿಹೊಗಿರುವ ಘಟನೆಗಳ ಮಧ್ಯೆ, ಹಲವು ಮರಗಳು ಧರೆಗುರಿಳಿವೆ. ಬೆಂಗಳೂರಿನ ಕೆ.ಆರ್ ವೃತ್ತದ ಕೇಳ ಸೇತುವೆ ಬಳಿ ಕಾರಿನಲ್ಲಿ ಸಿಲುಕಿ ಯುವತಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ದೊಡ್ಡಬಳ್ಳಾಪುರದ ರೈಲ್ವೆ ಅಂಡರ್ ಪಾಸ್ ಬಳಿ ಸೃಷ್ಟಿಯಾಗಿದ್ದ ಹಳ್ಳಕ್ಕೆ ಮಳೆಯ ನೀರು ಹರಿದು ಬೃಹತ್ ಹೊಂಡ ಸೃಷ್ಟಿಯಾಗಿದೆ. ಮಳೆ ನೀರಿನಿಂದ ತುಂಬಿದ್ದ ಹಳ್ಳಕ್ಕೆ ಸುಮಾರು 42 ವರ್ಷದ ವ್ಯಕ್ತಿ ಓರ್ವ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.